ಮರ ಮುರಿದು ಬಿದ್ದು ರಸ್ತೆ ತಡೆ

ಉಪ್ಪಳ: ಮಳೆಗೆ ಮರ ರಸ್ತೆಗೆ ಬಿದ್ದು ಸಂಚಾರಕ್ಕೆ ತಡೆ ಉಂಟಾದ ಘಟನೆ ನಡೆದಿದೆ. ನಿನ್ನೆ ರಾತ್ರಿ 10.30ರ ವೇಳೆ ಬಂದ್ಯೋಡು ಧರ್ಮತ್ತಡ್ಕ ರಸ್ತೆ ಪಂಜ ಎಂಬಲ್ಲಿ ರಸ್ತೆ ಬದಿಯಲ್ಲಿರುವ ಅಕೇಶೀಯ ಮರ ವಿದ್ಯುತ್ ತಂತಿ ಮೇಲೆ ಮುರಿದು ಬಿದ್ದಿದೆ. ಇದರಿಂದ ರಸ್ತೆಯಲ್ಲಿ ಸಂಚಾರ ಮೊಟಕುಗೊಂಡಿತ್ತು. ಮಾಹಿತಿ ತಿಳಿದು ಉಪ್ಪಳ ಅಗ್ನಿಶಾಮಕ ದಳ ತಲುಪಿ ಮರವನ್ನು ಕಡಿದು ತೆರವುಗೊಳಿಸಿದೆÀ. ಮರ ಮುರಿದು ಬೀಳುವ ವೇಳೆ ಸಂಚರಿಸುತ್ತಿದ್ದ ಕಾರೊಂದರ ಮೇಲೆ ರೆಂಬೆ ಬಿದ್ದು ಹಾನಿಗೊಂಡಿ ರುವುದಾಗಿ ಹೇಳಲಾಗಿದೆ.

You cannot copy contents of this page