ಐಎಂಎ ಕಾಸರಗೋಡು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ
ಕಾಸರಗೋಡು: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಇದರ ಕಾಸರಗೋಡು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಂಘಟನೆಯ ಮಹಾಸಭೆಯಲ್ಲಿ ನಡೆಯಿತು. ಹೊಸ ಪದಾಧಿಕಾರಿ ಗಳನ್ನಾಗಿ ಡಾ| ಹರಿಕಿರಣ್ ಬಂಗೇರ (ಅಧ್ಯಕ್ಷ), ಡಾ| ಅಣ್ಣಪ್ಪ ಕಾಮತ್ (ಕಾರ್ಯದರ್ಶಿ), ಡಾ| ಬಿ. ನಾರಾಯಣ ನಾಯ್ಕ್ (ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ), ಡಾ| ಖಾಸಿಂ ಟಿ (ಉಪಾಧ್ಯಕ್ಷ), ಡಾ| ಸುಧಾ ಭಟ್ (ಉಪಾಧ್ಯಕ್ಷೆ), ಡಾ| ಗೋಪಾಲಕೃಷ್ಣ ಪಿ. (ಜೊತೆ ಕಾರ್ಯದರ್ಶಿ), ಡಾ| ಅನೂಪ್ ಎಸ್. (ಕೋಶಾಧಿಕಾರಿ) ಎಂಬಿವರನ್ನು ಆರಿಸಲಾಯಿತು. ಡಾ. ಸಿ.ಎಚ್. ಜನಾರ್ದನ ನಾಯ್ಕ್ ಚುನಾ ವಣಾಧಿಕಾರಿಯಾಗಿ ಚುನಾವಣಾ ಕ್ರಮಗಳನ್ನು ನಿಯಂತ್ರಿಸಿದರು.