ಒಲಿಂಪಿಕ್ಸ್ ದಿನ: ಕಾಞಂಗಾಡ್‌ನಲ್ಲಿ ನಾಳೆ ಸಾಮೂಹಿಕ ಓಟ

ಕಾಸರಗೋಡು: ಅಂತಾರಾಷ್ಟ್ರ ಒಲಿಂಪಿಕ್ಸ್ ದಿನದ ಅಂಗವಾಗಿ ಕಾಞಂಗಾಡ್ ನಗರದಲ್ಲಿ ನಾಳೆ 5000 ಮಂದಿ ಪಾಲ್ಗೊಳ್ಳುವ ಸಾಮೂಹಿಕ ಓಟ ನಡೆಯಲಿದೆ.

ಬೆಳಿಗ್ಗೆ 9 ಗಂಟೆಗೆ ಕೋಟಚ್ಚೇರಿ ಬಸ್ ನಿಲ್ದಾಣ ಪರಿಸರ ದಿಂದ ಆರಂಭ ಗೊಳ್ಳುವ ಸಾಮೂಹಿಕ ಓಟ ಅಲಾಮಿ ಪಳ್ಳಿ ಎಂಬಲ್ಲಿ ಕೊನೆಗೊಳ್ಳಲಿದೆ. ಜಿಲ್ಲಾ ಒಲಿಂಪಿಕ್ಸ್ ಅಸೋಸಿ ಯೇಶನ್ ನೇತೃತ್ವದಲ್ಲಿ ನಡೆಯುವ ಈ ಓಟದಲ್ಲಿ  ವಿವಿಧ ಕ್ರೀಡಾ ಅಸೋ ಸಿಯೇಶನ್‌ಗಳು, ಕ್ಲಬ್‌ಗಳು, ಸಂಘಟ ನೆಗಳು, ವಿದ್ಯಾರ್ಥಿಗಳು ಪಾಲ್ಗೊಳ್ಳುವರು. ೩೩ನೇ ಒಲಿಂ ಪಿಕ್ಸ್ ಕ್ರೀಡಾ ಸ್ಪರ್ಧೆ ಗಳು ಜುಲೈ 26ರಿಂದ ಪ್ಯಾರಿಸ್‌ನಲ್ಲಿ  ನಡೆಯಲಿದ್ದು, ಇದರ ಪೂರ್ವಭಾ ವಿಯಾಗಿ ನಾಳೆ ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಸಾಮೂಹಿಕ ಓಟ ನಡೆಯಲಿದೆ.

You cannot copy contents of this page