ಕರ್ತವ್ಯ ಮಧ್ಯೆ ಅಪಾಯ: ಪೊಲೀಸರಿಗೆ ಆರು ತಿಂಗಳು ವೇತನ ಸಹಿತ ರಜೆ
ತಿರುವನಂತಪುರ: ಪೊಲೀಸ್ ಅಧಿಕಾರಿಗಳು ಕರ್ತವ್ಯದ ಮಧ್ಯೆ ಅಪಾಯ ಉಂಟಾದರೆ ಗುಣಮುಖ ರಾಗುವವರೆಗೆ ಪೂರ್ಣ ವೇತನ ದೊಂದಿಗೆ ರಜೆ ನೀಡಲಾಗುವುದು. ಈ ವಿಷಯ ಸ್ಪಷ್ಟಪಡಿಸಿ ಸರಕಾರ ಕೇರಳ ಸೇವಾ ಕಾಯ್ದೆಯಲ್ಲಿ ತಿದ್ದುಪಡಿ ತಂದಿದೆ. ಮೆಡಿಕಲ್ ಪ್ರಮಾಣ ಪತ್ರದ ಆಧಾರದಲ್ಲಿ ರಜೆ ಮಂಜೂರು ಮಾಡಲಾಗುವುದು.
ಒಂದೇ ಬಾರಿಯಾಗಿ ಆರು ತಿಂಗಳಿಗೂ ಹೆಚ್ಚು ರಜೆ ನೀಡಬೇಕಾಗಿ ಬಂದರೆ ಆ ವಿಷಯದಲ್ಲಿ ಸರಕಾರ ತೀರ್ಮಾನ ಕೈಗೊಳ್ಳಲಿದೆ. ಚಿಕಿತ್ಸಾ ರಜೆಗೆ ಡಾಕ್ಟರ್ ಪ್ರಮಾಣಪತ್ರದೊಂದಿಗೆ ಕಚೇರಿ ವರಿಷ್ಠಾಧಿಕಾರಿಯ ಶಿಫಾರಸು ಅಗತ್ಯವಿದೆ.