ಕಸಾಪದಿಂದ ಕಳ್ಳಿಗೆ ಮಹಾಬಲ ಭಂಡಾರಿ ಸಂಸ್ಮರಣೆ 7ರಂದು

ಕಾಸರಗೋಡು :ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕನ್ನಡದ ಧೀಮಂತ ಹೋರಾಟಗಾರ, ಮಾಜಿ ಶಾಸಕ ದಿ| ಕಳ್ಳಿಗೆ ಮಹಾಬಲ ಭಂಡಾರಿಯವರ ಸಂಸ್ಮರಣ ಕಾರ್ಯಕ್ರಮ ಜ. 7ರಂದು ಸಂಜೆ 4.30ಕ್ಕೆ ನುಳ್ಳಿಪ್ಪಾಡಿಯಲ್ಲಿರುವ ಕನ್ನಡ ಭವನ ಗ್ರಂಥಾಲಯದಲ್ಲಿ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಕಳ್ಳಿಗೆ ಮಹಾಬಲ ಭಂಡಾರಿ ಸಂಸ್ಮರಣೆ ಮಾಡುವರು.
ಕನ್ನಡ ಭವನ ಗ್ರಂಥಾಲಯದ ಅಧ್ಯಕ್ಷ ಕೆ .ವಾಮನ ರಾವ್ ಬೇಕಲ್, ಕ.ಸಾ.ಪದ ಮಾಜಿ ಕೋಶಾಧಿಕಾರಿ ಸುಕುಮಾರ ಆಲಂಪಾಡಿ ,ಗೌರವ ಕಾರ್ಯದರ್ಶಿಗಳಾದ ಶೇಖರ ಶೆಟ್ಟಿ ಬಾಯಾರು, ಪ್ರದೀಪ್ ಕುಮಾರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷಪುತ್ರಕಳ ಉಪಸ್ಥಿತರಿರುವರು.

You cannot copy contents of this page