ಪೊಲೀಸರಿಂದ ಸಿನಿಮಾ ಸೆಲ್ ಕಾರ್ಯಾಚರಣೆ: 3.355 ಗ್ರಾಂ ಎಂಡಿಎಂಎ ಸಹಿತ ಮೂವರ ಸೆರೆ, ಕಾರು ವಶ

ಕುಂಬಳೆ:  ಕುಂಬಳೆ ಪೊಲೀಸರು   ಸಿನಿಮೀಯ ಸ್ಟೈಲ್ ರೀತಿಯಲ್ಲಿ ನಡೆ ಸಿದ ಕಾರ್ಯಾಚ ರಣೆಯಲ್ಲಿ ಮಾದಕ ವಸ್ತುವಾದ 3.355 ಗ್ರಾಂ ಎಂಡಿಎಂಎ ಸಹಿತ ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂಗಲ್ಪಾಡಿ ಅಡ್ಕ ಹೌಸ್  ನಿವಾಸಿ ಅಬ್ದುಲ್ ಅಸೀಸ್ (42), ನೆಕ್ರಾಜೆ ಆಲಂಗೋಲ್ ಹೌಸ್ ನಿವಾಸಿ ಅಬೂಬಕ್ಕರ್ ಕೆ.ವಿ (32), ಮೊಗ್ರಾಲ್‌ನ ಮುಸ್ತಫ (44) ಬಂಧಿತ ಆರೋಪಿಗಳಾಗಿದ್ದಾರೆ.  ಕುಂಬಳೆ ಪೊಲೀಸ್ ಠಾಣೆ ಎಸ್‌ಐ ಅನೂಪ್  ನೇತೃತ್ವದ ಪೊಲೀಸ್ ತಂಡ ನಿನ್ನೆ ರಾತ್ರಿ ಮಂಗಲ್ಪಾಡಿ ಅಡ್ಕ ರಸ್ತೆ ರೋಯಲ್ ಸ್ಟ್ರೀಟ್‌ನಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಆ ದಾರಿಯಾಗಿ ಬಂದ ಕಾರನ್ನು ತಪಾಸಣೆಗಾಗಿ ಕೈಸನ್ನೆ  ಮಾಡಿ ನಿಲ್ಲಿಸುವಂತೆ ಸೂಚನೆ ನೀಡಿದಾಗ ಕಾರು ನಿಲ್ಲದೆ ಮುಂದಕ್ಕೆ ಸಾಗಿದೆ. ತಕ್ಷಣ ಪೊಲೀಸರು ಸಿನಿಮೀಯ ಮಾದರಿಯಲ್ಲಿ ಕಾರನ್ನು ತಮ್ಮ ವಾಹನದಲ್ಲಿ ಬೆನ್ನಟ್ಟಿದಾಗ ಆ ಕಾರಿನ ಚಕ್ರ ರಸ್ತೆಯ ಹೊಂq ವೊಂದರಲ್ಲಿ ಸಿಲುಕಿ ಅಲ್ಲೇ  ನಿಂತುಕೊಂ ಡಿತು. ತಕ್ಷಣ ಆ ಕಾರು ಮತ್ತು ಅದರಲ್ಲಿದ್ದ ಮೂವರು ಆರೋಪಿಗಳನ್ನು ತೀವ್ರ ತಪಾಸಣೆಗೊಳಪಡಿಸಿದಾಗ ಎಂಡಿಎಂಎ ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಇದರಂತೆ ಮಾಲು, ಕಾರಿನ ಸಹಿತ ಮೂವರನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚುವರಿ ಎಸ್‌ಐ ಸಂತೋಷ್ ವಿ.ವಿ, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಸಲಿನ್‌ದಾಸ್ ಮತ್ತು ಚಾಲಕ ಜಾಬೀರ್ ಎಂಬಿವರು ಈ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡದಲ್ಲಿ ಒಳಗೊಂಡಿದ್ದರು.

You cannot copy contents of this page