ಮನೆಯ ಫ್ಯೂಸ್ ಕಳಚಿದ ವಿದ್ಯುನ್ಮಂಡಳಿ : ರಾತ್ರಿ ಮನೆಯೊಳಗೆ ಮಹಿಳೆಗೆ ಹಾವು ಕಡಿತ

ಕಾಸರಗೋಡು:  ಸಕಾಲದಲ್ಲಿ ವಿದ್ಯುತ್ ಬಿಲ್ ಪಾವತಿಸದ ಹೆಸರಲ್ಲಿ ವಿದ್ಯುನ್ಮಂಡಳಿಯ ಸಿಬ್ಬಂದಿಗಳು ಮನೆಯ ಫ್ಯೂಸ್ ತೆಗೆದು ವಿದ್ಯುತ್ ಸಂಪರ್ಕ ವಿಚ್ಛೇಧಿಸಿದ್ದು, ಅದೇ ದಿನ ರಾತ್ರಿ ಮಹಿಳೆಗೆ ಮನೆಯೊಳಗೆ ವಿಷಪೂರಿತ ಹಾವು ಕಚ್ಚಿದ ಘಟನೆ ನಡೆದಿದೆ.

ಮೇಲ್ಪರಂಬ ನಿವಾಸಿಯಾದ ೪೩ರ ಹರೆಯದ ಮಹಿಳೆಗೆ ಹಾವು ಕಚ್ಚಿದ್ದು, ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರು ಕಳೆದ ಆರು ತಿಂಗಳಿಂದ ಮೇಲ್ಪರಂಬದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದಾರೆ.  ಇವರಿಗೆ ದಿನಗಳ ಹಿಂದೆ ವಿದ್ಯುತ್ ಬಿಲ್ ನೀಡಲಾಗಿತ್ತು. ಆದರೆ ಮೊತ್ತ ಹೆಚ್ಚಾಗಿದ್ದುದರಿಂದ  ಅದನ್ನು ಸಕಾಲದಲ್ಲಿ ಪಾವತಿಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ವಿದ್ಯುತ್ ಕಚೇರಿಯ ಸಿಬ್ಬಂದಿಗಳು ಮೊನ್ನೆ ಕ್ವಾರ್ಟರ್ಸ್‌ಗೆ ಬಂದು ಫ್ಯೂಸ್ ತೆಗೆದು ವಿದ್ಯುತ್ ಸಂಪರ್ಕ ವಿಚ್ಛೇಧಿಸಿದ್ದರು. ಅದೇ ದಿನ ರಾತ್ರಿ   ಕ್ವಾರ್ಟರ್ಸ್‌ನ ಅಡುಗೆ ಕೊಠಡಿಯೊಳಗೆ   ಮಹಿಳೆಗೆ  ಹಾವು ಕಚ್ಚಿದೆ. ತಕ್ಷಣ ಅವರನ್ನು     ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು ಆದರೆ ಚಿಕಿತ್ಸೆ ಲಭಿಸಲಿಲ್ಲ. ನಂತರ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತು. ಹಾವು ಕಡಿದ ವೇಳೆ   ಮನೆಯಲ್ಲಿ   ಕಾನೂನು ವಿದ್ಯಾರ್ಥಿನಿಯಾಗಿರುವ ಮಗಳು ಮಾತ್ರವೇ ಇದ್ದಳು.  ಪತಿ ಮತ್ತು ಪ್ಲಸ್‌ವನ್ ವಿದ್ಯಾರ್ಥಿಯಾಗಿರುವ ಮಗ   ಮನೆಯಲ್ಲಿವೆಂದು ಮನೆಯವರು ತಿಳಿಸಿದ್ದಾರೆ.

RELATED NEWS

You cannot copy contents of this page