ಕಸಾಯಿಖಾನೆಗೆ ತಂದ ಕೋಣ ಓಡಿ ಬಿದ್ದದ್ದು ಬಾವಿಗೆ: ಅಗ್ನಿಶಾಮಕದಳದಿಂದ ರಕ್ಷಣೆ
ಕಾಸರಗೋಡು: ಕಸಾಯಿ ಖಾನೆಗೆ ತಂದ ಕೋಣವೊಂದು ಹಗ್ಗ ತುಂಡರಿಸಿ ಓಡಿ ೨೫ ಕೋಲು ಆಳದ ಬಾವಿಗೆ ಬಿದ್ದಿದ್ದು, ಕೂಡಲೇ ತಲುಪಿದ ಅಗ್ನಿಶಾಮಕದಳ ಅದನ್ನು ಮೇಲಕ್ಕೆತ್ತಿ ರಕ್ಷಿಸಿದೆ.
ನಿನ್ನೆ ಬೆಳಿಗ್ಗೆ ವಿದ್ಯಾನಗರ ಪಡುವಡ್ಕ ಎಂಬಲ್ಲಿ ಘಟನೆ ನಡೆದಿದೆ. ಅಲ್ಲಿನ ಹಮೀದ್ ಎಂಬವರ ಹಿತ್ತಿಲಿನಲ್ಲಿರುವ ಆವರಣಗೋ ಡೆಯುಳ್ಳ ಬಾವಿಗೆ ಕೋಣ ಬಿದ್ದಿದೆ. ಹತ್ತು ಅಡಿ ನೀರಿರುವ ಬಾವಿಯೊಳಗೆ ಕೋಣ ಸಿಲುಕಿಕೊಂಡಿತ್ತು. ಈ ಬಗ್ಗೆ ಕೋಣದ ಮಾಲಕರಾದ ಅಬೂಬಕರ್ ಹಾಗೂ ಶಾಬಿರ್ ನೀಡಿದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕದಳದ ಸೀನಿಯರ್ ಫಯರ್‌ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ವೇಣುಗೋಪಾಲನ್‌ರ ನೇತೃತ್ವದಲ್ಲಿ ಸಿಬ್ಬಂದಿಗಳು ತಲುಪಿದ್ದಾರೆ. ಫಯರ್ ಆಂಡ್ ರೆಸ್ಕ್ಯೂ ಆಫೀಸರ್‌ಗಳಾದ ಶಂನಾದ್ ಹಾಗೂ ಸರಣ್ ಸುಂದರ್ ಬಾವಿಗಿಳಿದಿದ್ದಾರೆ. ಎರಡು ಗಂಟೆಗಳ ಕಾಲ ಮುಂದುವರಿದ ಕಾರ್ಯಾ ಚರಣೆ ಬಳಿಕ ಕೋಣವನ್ನು ಮೇಲಕ್ಕೆತ್ತಲಾಯಿತು. ಫಯರ್ ಆಂಡ್ ರೆಸ್ಕ್ಟೂ ಆಫೀಸರ್‌ಗಳಾದ ಎಂ.ಆರ್. ರಂಜಿತ್, ಕೆ. ಲಿನಿನ್, ಕೆ.ಆರ್. ಅಜೇಶ್ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.