ಕಾಸರಗೋಡಿನಲ್ಲಿ ಉಣ್ಣಿತ್ತಾನ್‌ಗೆ ಮತ್ತೆ ಮಣೆ: ವಯನಾಡಿನಲ್ಲಿ ರಾಹುಲ್ ಗಾಂಧಿ
ಕಾಸರಗೋಡು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಯುಡಿ ಎಫ್ ಉಮೇದ್ವಾರರಾಗಿ ಸ್ಪರ್ಧಿಸಲಿರುವ ಯಾದಿಯನ್ನು ಕಾಂಗ್ರೆಸ್ ಕೊನೆಗೂ ಪ್ರಕಟಿಸಿದೆ. ಇದರಂತೆ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್‌ರನ್ನು ಮತ್ತೆ ಕಣಕ್ಕಿಳಿಸವಲಾಗಿದೆ.
ವಯನಾಡಿನಲ್ಲಿ ಹಾಲಿ ಸಂಸದ ರಾಹುಲ್ ಗಾಂಧಿಯವರೇ ಮತ್ತೆ ಯುಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸುವರು. ಇನ್ನು ತೃಶೂರಿನಲ್ಲಿ ಮಹತ್ತರ ರಾಜಕೀಯ ಬೆಳವಣಿಗೆಯೊಂ ದರಲ್ಲಿ ಆ ಕ್ಷೇತ್ರದಲ್ಲಿ ಸ್ಪರ್ಧಿಸಲು ತಿಂಗಳುಗಳ ಹಿಂದೆಯೇ ಅಗತ್ಯದ ಎಲ್ಲಾ ಪೂರ್ವ ತಯಾರಿಕೆಯೊಂದಿಗೆ ರಂಗಕ್ಕಿಳಿದಿದ್ದ ಅಲ್ಲಿನ ಹಾಲಿ ಸಂಸದ ಟಿ.ಎನ್. ಪ್ರತಾಪನ್‌ರನ್ನು ಕೊನೇ ಕ್ಷಣದಲ್ಲಿ ಬದಲಾಯಿಸಿ, ಆ ಕ್ಷೇತ್ರದಲ್ಲಿ ಈಗ ವಡಗರೆ ಕ್ಷೇತ್ರದ ಸಂಸದ ಆಗಿರುವ ಕೆ. ಮುರಳೀಧರನ್‌ರನ್ನು ಕಣಕ್ಕಿಳಿಸಲಾ ಗಿದೆ. ಇಂತಹ ದಿಢೀರ್ ಟ್ವಿಸ್ಟ್ ಪ್ರತಾಪನ್ ಬೆಂಬಲಿಗರನ್ನು ತೀವ್ರ ನಿರಾಶೆಗೊಳಿಸಿದೆ. ಚುನಾವಣಾ ಪ್ರಚಾರಕ್ಕಾಗಿ ಟಿ.ಎನ್. ಪ್ರತಾಪನ್ ತನ್ನ ಹೆಸರಲ್ಲಿ ಮೂರು ಲಕ್ಷ ರೂ. ವ್ಯಯಿಸಿ ಬೃಹತ್ ಬ್ಯಾನರ್‌ಗಳನ್ನು ತಯಾರಿಸಿಟ್ಟಿದ್ದು, ಅದೆಲ್ಲವೂ ಈಗ ವೇಸ್ಟ್ ಆದಂತಾಗಿದೆ.
ಇನ್ನು ಕಾಂಗ್ರೆಸ್ ಕೇಂದ್ರ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋ ಪಾಲನ್‌ರನ್ನು ಆಲಪ್ಪುಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸ ಲಾಗಿದೆ. ಈಗ ಕೆ. ಮುರಳೀಧರನ್ ಪ್ರತಿನಿಧೀಕರಿಸುವ ವಡಗರೆ ಕ್ಷೇತ್ರದಲ್ಲಿ ಶಾಫಿ ಪರಂಬಿಲ್‌ರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಈಗ ಸಂಸದರಾಗಿರುವ ಹೆಚ್ಚಿನ ಎಲ್ಲಾ ನೇತಾರರಿಗೂ ಕಾಂಗ್ರೆಸ್ ಮತ್ತೆ ಟಿಕೆಟ್ ನೀಡಿದೆ. ಇದರಂತೆ ತಿರುವನಂತಪುರದಲ್ಲಿ ಹಾಲಿ ಸಂಸದ ಶಶಿ ತರೂರ್, ಅಟ್ಟಿಂಗಾಲ್‌ನಲ್ಲಿ ಅಡೂರ್ ಪ್ರಕಾಶ್, ಮಾವೇಲಿಕ್ಕರ- ಕೊಡಿಕುನ್ನಿಲ್ ಸುರೇಶ್, ಪತ್ತನಂತಿಟ್ಟ- ಆಂಟೋ ಆಂಟನಿ, ಇಡುಕ್ಕಿ-ಡೀನ್ ಕುರ‍್ಯಾಕೋಸ್, ಎರ್ನಾಕುಳಂ- ಹೆಬಿ ಈಡನ್, ಚಾಲಕ್ಕುಡಿ- ಬೆನ್ನಿ ಬೆಹನಾನ್, ಪಾಲ್ಘಾಟ್- ವಿ.ಕೆ. ಶ್ರೀ ಕಂಠನ್, ಆಲತ್ತೂರು- ರಮ್ಯ ಹರಿದಾಸ್, ಕಲ್ಲಿಕೋಟೆ- ಎಂ.ಕೆ. ರಾಘವನ್ ಮತ್ತು ಕಣ್ಣೂರು- ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್‌ರನ್ನು ಮತ್ತೆ ಕಣಕ್ಕಿಳಿಸಲಾಗಿದೆ.
ರಾಜ್ಯದ ೨೦ ಲೋಕಸಭಾ ಕ್ಷೇತ್ರದಲ್ಲಿ ೧೭ರಲ್ಲಿ ಯುಡಿಎಫ್ ಉಮೇ ದ್ವಾರರಾಗಿ ಕಾಂಗ್ರೆಸ್ ಸ್ಪರ್ಧಿಸುತ್ತಿದ್ದು, ಹೀಗೆ ಈ ೧೭ ಉಮೇದ್ವಾರರಲ್ಲಿ ಕೇವಲ ಒಂದು ಸೀಟನ್ನು ಮಾತ್ರವೇ ಮಹಿಳೆಗೆ ಬಿಟ್ಟುಕೊಡಲಾಗಿದೆ.