ಕಾಸರಗೋಡಿನ ತುಳು ಬಿಲ್ಲವರ ಆಚಾರ ಕೈಪಿಡಿ ಬಿಡುಗಡೆ

ಕಾಸರಗೋಡು: ತುಳು ಬಿಲ್ಲವ ಸಮಾಜದ ಆಚಾರ ವಿಚಾರ, ಅನುಷ್ಠಾನ ಗಳ ಬಗ್ಗೆ ವಿವಿಧ ಮೂಲಗಳಿಂದ ಸಂಗ್ರ ಹಿಸಿದ ಮಾಹಿತಿಯನ್ನು ಕ್ರೋಢೀಕರಿಸಿ ತಯಾರಿಸಿದ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಸಿಬಿಐಯ ಸೀನಿಯರ್ ಪಬ್ಲಿಕ್ ಪ್ರೋಸಿಕ್ಯೂಟರ್ ಶಿವಾನಂದ ಪೆರ್ಲ ಅಡ್ಕತ್ತಬೈಲು ಕೋಟಿಚೆನ್ನಯ್ಯ ಗರಡಿಯ ಪಾತ್ರಿ ರಮೇಶರಿಗೆ ನೀಡಿ ಕೃತಿ ಬಿಡು ಗಡೆಗೊಳಿಸಿದರು. ಕೊರಕ್ಕೋಡು ತರವಾಡು ವಸಂತ ಪೂಜಾರಿ, ಸೋಮಪ್ಪ ಪೂಜಾರಿ, ಬಿಲ್ಲವ ಮುಂದಾಳುಗಳಾದ ರಘು ಕೆ, ಕಮಲಾಕ್ಷ ಸುವರ್ಣ, ದಯಾನಂದ ಉಪ ಸ್ಥಿತರಿದ್ದರು. ಕೈಪಿಡಿ ಸಂಗ್ರಹಿಸಿದ ಅಶೋಕ ಬಾಡೂರು ಪ್ರಸ್ತಾಪಿಸಿದರು. ಇದೇ ವೇಳೆ ಮುದ್ರಣಕ್ಕೆ ಸಹಾಯ ಮಾಡಿದ ಸುರೇಶ ಸುವರ್ಣರನ್ನು ಗೌರವಿಸಲಾಯಿತು.  ಭಾಸ್ಕರ ಕೆ. ನಿರೂಪಿಸಿದರು. ಶಿವ ಕೆ. ವಂದಿಸಿದರು.

RELATED NEWS

You cannot copy contents of this page