ಕುಂಬಳೆ ಸಾಮೂಹಿಕ ಆರೋಗ್ಯ ಕೇಂದ್ರಕ್ಕೆ   ನುಗ್ಗಿ ದಾಂಧಲೆ: ಆರೋಪಿಗಳಿಗಾಗಿ ಶೋಧ

ಕುಂಬಳೆ: ಕುಂಬಳೆ ಸಾಮೂಹಿಕ ಆರೋಗ್ಯ ಕೇಂದ್ರಕ್ಕೆ ಅತಿಕ್ರಮಿಸಿ ನುಗ್ಗಿ ದಾಂಧಲೆ ನಡೆಸಿದ ತಂಡದ ವಿರುದ್ಧ  ಕೇಸು ದಾಖಲಿಸಿಕೊಂಡ  ಕುಂಬಳೆ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.  ಆರೋಪಿಗಳ ಮಾಹಿತಿ ಲಭಿಸಿದೆಯೆಂದೂ ಅವರನ್ನು ಶೀಘ್ರ ಬಂಧಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯ ನರ್ಸಿಂಗ್ ಸೀನಿಯರ್ ಆಫೀಸರ್ ರೇಖಾ ಆರ್ ನಾಯರ್ ನೀಡಿದ ದೂರಿನಂತೆ ಕಂಡರೆ ಪತ್ತಹಚ್ಚಬಹುದಾದ ಮೂವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ತಿಂಗಳ ೨ರಂದು ಮಧ್ಯಾಹ್ನ ೧ ಗಂಟೆ ವೇಳೆ ಘಟನೆ ನಡೆದಿದೆ. ಒ.ಪಿ ಟಿಕೆಟ್ ನಿಲ್ಲಿಸಲಾಯಿತೆಂದು ಆರೋಪಿಸಿ ತಂಡ  ಕಚೇರಿಗೆ ನುಗ್ಗಿ ಅವಾಚ್ಯವಾಗಿ ನಿಂದಿಸಿ ಅಧಿಕಾರಿಗಳ  ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಕರ್ತವ್ಯದಲ್ಲಿದ್ದ ವೈದ್ಯೆಯೊಂದಿಗೂ ವಾಗ್ವಾದಕ್ಕಿಳಿದ ತಂಡ ಅವರನ್ನು ಕೆಲಸ ಮಾಡದಂತೆ ತಡೆದಿರು ವುದಾಗಿಯೂ ದೂರಲಾ ಗಿದೆ. ಅನುಮತಿಯಿಲ್ಲದೆ ಆಸ್ಪತ್ರೆಯೊ ಳಗೆ ನುಗ್ಗಿದ ತಂಡ ಮಹಿಳೆಯರ ಹಾಗೂ ರೋಗಿಗಳ ವೀಡಿಯೋ ತೆಗೆದು ಪ್ರಚಾರಗೈದಿರುವುದಾಗಿಯೂ ದೂರಲಾಗಿದೆ.

You cannot copy contents of this page