ಕಾಸರಗೋಡು ನಗರಸಭೆ, ಮೊಗ್ರಾಲ್ ಪುತ್ತೂರು ಪಂಚಾಯತ್ನ ಮೂರು ವಾರ್ಡ್ಗಳಿಗೆ ಉಪ ಚುನಾವಣೆ ನಾಳೆ
ಕಾಸರಗೋಡು: ಕಾಸರಗೋಡು ನಗರಸಭೆಯ ಖಾಸೀಲೈನ್ ವಾರ್ಡ್ ಮತ್ತು ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ನ ಕೋಟೆಕುಂಜೆ (ಕೋಟೆಕುನ್ನು) ಹಾಗೂ ಕಲ್ಲಂಗೈ ವಾರ್ಡ್ಗಳಿಗೆ ನಾಳೆ ಉಪ ಚುನಾವಣೆ ನಡೆಯಲಿದೆ. ಒಟ್ಟು ೧೯ ಮಂದಿ ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. ಕಾಸರಗೋಡು ನಗರಸಭೆಯ ಖಾಸೀಲೈನ್ ವಾರ್ಡ್ನಲ್ಲಿ ಐದು, ಮೊಗ್ರಾಲ್ ಪುತ್ತೂರು ಪಂಚಾಯತ್ನ ಕೋಟೆಕುಂಜೆ ವಾರ್ಡ್ನಲ್ಲಿ ಆರು ಮತ್ತು ಕಲ್ಲಂಗೈ ವಾರ್ಡ್ನಲ್ಲಿ ಎಂಟು ಮಂದಿ
ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. ಉಪ ಚುನಾವಣೆ ಅಗತ್ಯವಿರುವ ವ್ಯಾಪಕ ಸಿದ್ಧತೆಗಳನ್ನು ಈಗಾಗಲೇ ನಡೆಸಲಾಗಿದೆ.
ಜುಲೈ ೧ರಂದು ಪ್ರಕಟಿಸಲಾದ ಹೊಸ ಮತದಾರ ಪಟ್ಟಿಯ ಆಧಾರದಲ್ಲಿ ಉಪ ಚುನಾವಣೆ ನಡೆಯಲಿದೆ. ಚುನಾವಣೆಗಾಗಿರುವ ಸಾಮಗ್ರಿ ವಿತರಣೆ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ನಡೆಯಲಿದೆ.