ಕಾಸರಗೋಡು ಸಾರೀಸ್ ಆನರ್ಶಿಪ್ ಕಾರ್ಡ್ ಬಿಡುಗಡೆ
ಕಾಸರಗೋಡು: ಕಾಸರಗೋಡು ಸಾರೀಸ್ ಖರೀದಿಸುವವರಿಗೆ ನೀಡುವ ಆನರ್ಶಿಪ್ ಕಾರ್ಡ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಡುಗಡೆಗೊಳಿಸಲಾ ಯಿತು. ಕಾಸರಗೋಡು ಸಾರಿ ಮಾರಾಟ ವಿಫುಲಗೊಳಿಸುವುದರಂಗವಾಗಿ ಜಿಲ್ಲಾಡ ಳಿತದ ನೇತೃತ್ವದಲ್ಲಿ ವಿವಿಧ ಚಟುವಟಿಕೆ ನಡೆಸಲಾಗುತ್ತಿದೆ. ಜಿಲ್ಲಾ ಕೈಗಾರಿಕಾ ಕೇಂದ್ರ ಜನರಲ್ ಮೆನೇಜರ್ ಕೆ. ಸಜಿತ್ ಕುಮಾರ್, ಕಾಸರಗೋಡು ಸಾರೀಸ್ ಸ್ಪೆಷಲ್ ಆಫೀಸರ್ ಆದಿಲ್ ಮೊಹಮ್ಮದ್, ಕಾಸರಗೋಡು ವೀವರ್ಸ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಮಾಧವ ಹೇರಳ, ಕಾರ್ಯದರ್ಶಿ ಬಿ.ಎನ್. ಅನಿತ, ನಿರ್ದೇಶಕರಾದ ದಾಮೋದರ, ರಾಮ ಚಂದ್ರ, ಗಂಗಮ್ಮ, ಲಿಜಾ ಥೋಮಸ್, ಮಮತಾ ಭಾಗವಹಿಸಿದರು.