ನಗರಸಭೆ ಕಚೇರಿ ಬಳಿ ದುರ್ವಾಸನೆ: ಮಲಿನ ಜಲ ಹರಡಿ ಸಮಸ್ಯೆ

ಕಾಸರಗೋಡು: ನಗರಸಭೆಯ ಕಚೇರಿಗೆ ತೆರಳುವವರ ಗಮನಕ್ಕೆ…. ಮೂಗಿನಿಂದ ಗಾಳಿ ಒಳಗೆಹೋಗ ದಂತಹ ಯಾವುದಾದರೂ ವಸ್ತು ಮೂಗಿಗೆ  ಸಿಲುಕಿಸಿ ತೆರಳಲು ಸೂಚನೆ. ಯಾಕೆಂದರೆ ದುರ್ವಾಸನೆ ಸಹಿಸಲು ಇಲ್ಲಿ ಅಸಾಧ್ಯವಾಗುತ್ತಿದೆ. ನಗರಸಭೆಯ ಕಚೇರಿಯ ಬಳಿ ಯಲ್ಲೇ ಇರುವ ಶೌಚಾಲಯದ ಟ್ಯಾಂಕ್‌ನ ಗುಂಡಿಯಿಂದ ಮಲಿನ ಜಲ ಕಚೇರಿ ಮುಂಭಾಗದಲ್ಲಿ ಹರಡುತ್ತಿದೆ. ಇದನ್ನೇ ಮೆಟ್ಟಿ ಕಚೇರಿಯ ಒಳಗೆ ಪ್ರವೇಶಿಸಬೇಕಾ ಗುತ್ತಿದ್ದು, ಈ ಪರಿಸರವಿಡೀ ದುರ್ವಾಸನೆ ಹರಡುತ್ತಿದೆ.  ಆದರೂ ಇಲ್ಲಿ ಕಣ್ಣು, ಮೂಗು ಮುಚ್ಚಿ ಕುಳಿತುಕೊಳ್ಳಬೇಕಾದ ಸ್ಥಿತಿ ಇದೆಯೆಂದು ಇಲ್ಲಿಗೆ ತೆರಳುವವರು ಅಭಿಪ್ರಾಯಪಟ್ಟಿದ್ದಾರೆ.

RELATED NEWS

You cannot copy contents of this page