ಕುಂಟಾರಿನಲ್ಲಿ ಒತ್ತೆಕೋಲ ನಾಳೆ

ಮುಳ್ಳೇರಿಯ: ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ಕ್ಷೇತ್ರ ಪರಿಸರದಲ್ಲಿ ಶ್ರೀ ರಕ್ತೇಶ್ವರಿ ದೈವದ ನೇಮ, ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ನಾಳೆ ಹಾಗೂ ೧೯ರಂದು ನಡೆಯಲಿದೆ. ನಾಳೆ ಬೆಳಿಗ್ಗೆ ೧೦ಕ್ಕೆ ರಕ್ತೇಶ್ವರಿ ದೈವ, ರಾತ್ರಿ ೭.೩೦ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಆಗಮನ, ೮ಕ್ಕೆ ದೈವಗಳ ಆರಂಭ, ಮೇಲೇರಿಗೆ ಅಗ್ನಿಸ್ಪರ್ಶ, ಅನ್ನ ಸಂತರ್ಪಣೆ, ಅಂಗನವಾಡಿ ಮಕ್ಕಳು ಮತ್ತು ಸ್ಥಳೀಯರಿಂದ ನೃತ್ಯ ವೈವಿಧ್ಯ, ದೈವದ ಕುಳಿಚ್ಚಾಟ, ೧೯ರಂದು ಮುಂಜಾನೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಸ್ನಾನ ಬಳಿಕ ಭಂಡಾರ ನಿರ್ಗಮನ ನಡೆಯಲಿದೆ.

You cannot copy contents of this page