ಕುಂಟಾರು ದೇಗುಲಕ್ಕೆ ಸ್ವರ್ಣಪಾದುಕಾ ಸವಾರಿ
ಮುಳ್ಳೇರಿಯ: ಶ್ರೀ ರಾಘ ವೇಂದ್ರ ಭಾರತೀ ಸ್ವಾಮೀಜಿಯವರ ಆಶೀರ್ವಾದ ದೊಂದಿಗೆ ಗೋಕರ್ಣದ ಅಶೋಕೆಯಲ್ಲಿ ವೇದ ವೇದಾಂಗ ಜ್ಯೋತಿಷ್ಯವೇ ಮೊದಲಾದ ೬೪ ಕಲೆಗಳನ್ನು ಬೋಧಿ ಸುವ ಸಲುವಾಗಿ ನೂತನವಾಗಿ ಆರಂಭ ವಾದ ವಿಷ್ಣುಗುಪ್ತ ವಿಶ್ವವಿದ್ಯಾಲಯವನ್ನು ಸಮಾಜಕ್ಕೆ ಪರಿಚಯಿಸುವ ಸಲುವಾಗಿ ಶಂಕರಾಚಾರ್ಯ ಪರಂಪರೆಯ 36 ಯತಿವರ್ಯರ ದಿವ್ಯ ಸಾನಿಧ್ಯವಿರುವ ಸ್ವರ್ಣ ಪಾದುಕಾ ಸವಾರಿ ನಾಳೆ ಕುಂಟಾರು ಶ್ರೀ ವಿಷ್ಣುಮೂರ್ತಿ ಕ್ಷೇತ್ರಕ್ಕೆ ಆಗಮಿಸಲಿದೆ. ನಾಳೆ ಸಂಜೆ ೬.೩೦ಕ್ಕೆ ಪಾದುಕೆಯ ಆಗಮನ, ರಾತ್ರಿ 7ಕ್ಕೆ ಧೂಳೀಪೂಜೆ, ಮೊಕ್ಕಾಂ, ಅನ್ನಸಂತಪಣೆ ನಡೆಯಲಿದೆ. ಡಿ. 7ರಂದು ಬೆಳಿಗ್ಗೆ ೭ಕ್ಕೆ ಪಾದುಕಾ ಸೇವೆಗಳು, 10.30ಕ್ಕೆ ಭಿಕ್ಷಾಂಗ, ಪೂಜಾಸೇವೆ, 12ರಿಂದ ಸಭೆ, ಅನ್ನಸಂತರ್ಪಣೆ ನಡೆಯಲಿದೆ.