ಕುಂಟಿಕಾನ ಮಠದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಸಂಪನ್ನ
ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಇಂದು ಬೆಳಿಗ್ಗೆ ಜರಗಿತು. ಇದರಂಗವಾಗಿ ದೇವರ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾ ಬಲಿ, ಮಹಾಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ ಜರಗಿತು. ಅಪರಾಹ್ನ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರಿಂದ ಆಶೀರ್ವಚನ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಸಂಗೀತ ಕಛೇರಿ ಜರಗಿದ್ದು, ಸಂಜೆ ಸ್ವರ ಸಿಂಚನ, ಚೆಂಡೆ ಮೇಳ, ದೀಪಾರಾಧನೆ ನಡೆಯಲಿದೆ. ಶ್ರೀ ದೇವರ ಬಲಿ ಉತ್ಸವ ಜರಗಲಿದೆ.