ಕುಂಟಿಕಾನ ಮಠದ ಸತೀಶ ಕೆ.ಎಂ.ಗೆ ಎನ್‌ಸಿಸಿ ಲೆಫ್ಟಿನೆಂಟ್ ಪದವಿ
ಬದಿಯಡ್ಕ: ಜಿಲ್ಲೆಯ ನೀರ್ಚಾಲು ಕುಂಟಿಕಾನ ಮಠದ ಸತೀಶ ಕೆ.ಎಂ. ಎನ್‌ಸಿಸಿ ಲೆಫ್ಟಿನೆಂಟ್ ಪದವಿ ಪಡೆದಿರುತ್ತಾರೆ. ಭಾರತ ರಕ್ಷಣಾ ಸಚಿವಾಲಯದ ಅದಿsÃನದಲ್ಲಿ ಬರುವ ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್.ಸಿ.ಸಿ.) ಆಫೀಸರ್ಸ್ ಟ್ರೆöÊನಿಂಗ್ ಅಕಾಡೆಮಿ, ಕಾಂಪ್ಟಿ, ನಾಗಪುರ್, ಮಹಾರಾಷ್ಟç ಇಲ್ಲಿ 3 ತಿಂಗಳುಗಳ ಕಾಲ ಫ್ರೀ ಕಮಿಷನ್ ಕೋರ್ಸ್ (ಎಸ್‌ಡಿ 173)ನ್ನು ಪೂರೈಸಿರುತ್ತಾರೆ. ಎನ್‌ಸಿಸಿ ನಿಯಮ 1948 ಉಪವಿ 21(5)ರ ಅಡಿಯಲ್ಲಿ ಸತೀಷ ಕೆ.ಎಂ. ಇವರಿಗೆÀ ಲೆಫ್ಟಿನೆಂಟ್ ಪದವಿಯನ್ನು ನೀಡಲಾಗಿದೆ.
ಪ್ರಸ್ತುತ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ (ಕೆಪಿಟಿ), ಮಂಗಳೂರು ಇಲ್ಲಿ ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ವಿಭಾಗಾದಿsಕಾರಿ ಹಾಗೂ ಹಿರಿಯ ಶ್ರೇಣಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿವೃತ್ತ ಅಧ್ಯಾಪಕ, ಹವ್ಯಾಸಿ ಯಕ್ಷಗಾನ ಕಲಾವಿದ ಕುಂಟಿಕಾನ ಮಠದ ಮನೆಯ ಕೆ.ಎಂ. ಶಾಮ ಭಟ್ -ಸರಸ್ವತಿ ದಂಪತಿ ಪುತ್ರನಾಗಿದ್ದಾರೆ.