ಕುಂಬಳೆಯಲ್ಲಿ ಆಡು ಕಳವು: ಆರೋಪಿ ಕರ್ನಾಟಕದಿಂದ ಸೆರೆ
ಕುಂಬಳೆ: ಮನೆಯಲ್ಲಿ ಸಾಕುತ್ತಿದ್ದ ಆಡನ್ನು ಕಳವು ನಡೆಸಿದ ಪ್ರಕರಣದ ಆರೋಪಿಯಾದ ಕರ್ನಾಟಕ ನಿವಾಸಿಯನ್ನು ಬಂಧಿಸಲಾಗಿದೆ.
ಶಿವಮೊಗ್ಗ ನಿವಾಸಿ ಶಕ್ಕ್ಲ್ಲ ಖಾನ್ (೨೩) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ಈತನನ್ನು ಕರ್ನಾಟಕದ ಬ್ರಹ್ಮಪುರದಿಂದ ಕರ್ನಾಟಕ ಪೊಲೀಸರ ಸಹಾಯದೊಂದಿಗೆ ಕುಂಬಳೆ ಪೊಲೀ ಸರು ಸೆರೆಹಿಡಿದಿದ್ದಾರೆ. ಆರೋಪಿಯನ್ನು ಕುಂಬಳೆಗೆ ತಲುಪಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾ ಗಿದೆ. ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ತಿಂಗಳುಗಳ ಹಿಂದೆ ಕುಂಬಳೆ ಸಿಎಚ್ಸಿ ರಸ್ತೆಯ ಅಬ್ಬಾಸ್ ಎಂಬವರ ಮನೆಯಲ್ಲಿ ಸಾಕು ತ್ತಿದ್ದ ನಾಲ್ಕು ಆಡುಗಳು ಕಳವಿಗೀ ಡಾಗಿತ್ತು. ಈ ಬಗ್ಗೆ ಅಬ್ಬಾಸ್ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರೂ ಪೊಲೀಸರು ಕೇಸು ದಾಖಲಿಸಿಕೊಂಡಿ ರಲಿಲ್ಲ. ಇದರಿಂದ ಅಬ್ಬಾಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಇದರಂತೆ ಎಸ್ಪಿಯವರ ನಿರ್ದೇಶದ ಮೇರೆಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದರು. ಇದೇ ವೇಳೆ ಒಂದು ಆಡನ್ನು ಕಳವುಗೈದು ಕೊಂಡೊಯ್ಯುವ ದೃಶ್ಯ ಸಮೀಪದ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿತ್ತು. ಅದನ್ನು ಪರಿಶೀಲಿಸಿದ ಪೊಲೀಸರು ಆರೋಪಿ ಕರ್ನಾಟಕ ನಿವಾಸಿಯೆಂದು ಪತ್ತೆಹಚ್ಚಿದ್ದರು. ಇದರಂತೆ ಇನ್ಸ್ಪೆಕ್ಟರ್ ಎಂ.ಎಲ್. ಬಿಜೋರ ನೇತೃತ್ವದಲ್ಲಿ ಎಸ್ಐ ಉಮೇಶ್, ಪೊಲೀಸರಾದ ಗೋಕು ಲ್, ಮನು, ತೃಷ್ಣ ಎಂಬಿವರು ಕರ್ನಾಟಕ ಪೊಲೀಸರ ಸಹಾಯದೊಂದಿಗೆ ಆರೋಪಿಯನ್ನು ಪತ್ತೆಹಚ್ಚಿ ಸೆರೆಹಿಡಿದಿದ್ದಾರೆ. ಸೆರೆಗೀಡಾದ ಶಕ್ಕ್ಲ್ಲ ಖಾನ್ ಆಡುಗಳನ್ನು ಕಳವು ನಡೆಸುವ ತಂಡದ ಪ್ರಧಾನ ಕೊಂಡಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.