ಕುಂಬಳೆ ಮರ್ಚಂಟ್ಸ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿ ಚುನಾವಣೆಯಲ್ಲಿ ವ್ಯಾಪಾರ ಸಂಸ್ಥೆಗಳು, ಲೈಸನ್ಸ್ ಇಲ್ಲದವರು ಅಭ್ಯರ್ಥಿಗಳೆಂದು ಆರೋಪ

ಕಾಸರಗೋಡು: ಕುಂಬಳೆ ಮರ್ಚಂಟ್ಸ್ ವೆಲ್ಫೇರ್ ಸಹಕಾರಿ ಸಂಘ ಆಡಳಿತ ಸಮಿತಿಗೆ ಔಪಚಾರಿಕವಾಗಿ ಸ್ಪರ್ಧಿಸುವ ಇಬ್ಬರಿಗೆ ವ್ಯಾಪಾರ ಸಂಸ್ಥೆ, ವ್ಯಾಪಾರ ಲೈಸನ್ಸ್ ಇಲ್ಲವೆಂದು ವಿರೋಧಿ ಪ್ಯಾನೆಲ್‌ನ ಅಭ್ಯರ್ಥಿಗಳು, ಸೊಸೈಟಿ ಸದಸ್ಯರು ಆರೋಪಿಸಿದ್ದಾರೆ. ಇನ್ನೋರ್ವ ಸದಸ್ಯನಿಗೆ ಲೈಸನ್ಸ್ ಇಲ್ಲ. ಐದು ಮಂದಿಗೆ ಇರುವ ಒಂದು ಲೈಸನ್ಸ್‌ನಲ್ಲಿ ಮತ್ತೋರ್ವ ಅಭ್ಯರ್ಥಿಯಾಗಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಸಂಬಂಧಪಟ್ಟವರು ತಿಳಿಸಿದ್ದಾರೆ. ಔದ್ಯೋಗಿಕ ಪ್ಯಾನಲ್‌ನ ವಿರುದ್ಧ ಸ್ಪರ್ಧಿಸುವ ಇಬ್ಬರಲ್ಲಿ ಸ್ಪರ್ಧೆಯಿಂದ ಹಿಂಜರಿಯಬೇಕೆಂದು, ಇಲ್ಲದಿದ್ದರೆ ಮುಂದಿನ ಕ್ರಮಗಳನ್ನು ಎದುರಿಸಬೇಕಾದಿತೆಂದು ಮುನ್ನೆಚ್ಚರಿಕೆ ನೀಡಿರುವುದಾಗಿ ಬದಲಿ ಪ್ಯಾನೆಲ್‌ನ ಅಭ್ಯರ್ಥಿಗಳು ತಿಳಿಸಿದ್ದಾರೆ. ಗಂಭೀರವಾದ ಆರೋಪಗಳನ್ನು ಎದುರಿಸುತ್ತಿರುವ ಕುಂಬಳೆ ಮರ್ಚಂಟ್ಸ್ ವೆಲ್ಫೇರ್ ಸಹಕಾರಿ ಸಂಘದ ಆಡಳಿತ ಸಮಿತಿ ಚುನಾವಣೆ ಮತ್ತೊಮ್ಮೆ ಗಂಭೀರ ಆರೋಪಗಳಿಗೆ ಎಡೆಮಾಡಿದೆ. ಸೊಸೈಟಿ ಆಡಳಿತ ಸಮಿತಿ ಸದಸ್ಯರಾಗಿದ್ದವರು, ಮೆಂಬರ್‌ಗಳು ಆರೋಪ ಹೊರಿಸಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಕಾನೂನು ವಿರುದ್ಧ ಕ್ರಮಗಳು, ಭ್ರಷ್ಟಾಚಾರದ ವಿರುದ್ಧ 66ನೇ ಕಾಯ್ದೆ ಪ್ರಕಾರ ತನಿಖೆ ಕ್ರಮಗಳನ್ನು ಎದುರಿಸುವ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ರಾಜೇಶ್, ಕಾರ್ಯದರ್ಶಿ ಸತ್ತಾರ್, ಕೋಶಾಧಿಕಾರಿ ಅನ್ವರ್ ಎಂಬಿವರು ಔದ್ಯೋಗಿಕ ಪ್ಯಾನೆಲ್‌ನ ಅಭ್ಯರ್ಥಿ ಗಳಾಗಿದ್ದಾರೆಂದು, ಇದು ಸಹಕಾರಿ ಕಾನೂನಿಗೆ ಎದುರಾಗಿದೆಯೆಂದು ಇನ್ನೊಂದು ವಿಭಾಗ ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದೆ. ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಬರ್ಖಾಸ್ತುಗೊಳಿಸಿದ ಬ್ಯಾಂಕ್‌ನ ಆಡಳಿತ ಸಮಿತಿ, ಹೊಸ ಆಡಳಿತ ಸಮಿತಿಗೆ ಅರ್ಹರಾದವರ ಪ್ಯಾನೆಲ್ ಸಿದ್ಧಪಡಿಸಲು ಪದಾಧಿ ಕಾರಿಗಳಿಗೆ ಹೊಣೆ ನೀಡಲಾಗಿತ್ತು. ಆದರೆ ಅವರು ಸಭೆ ಸೇರಿ ತಮ್ಮನ್ನೇ ಹೊಸ ಅಭ್ಯರ್ಥಿಗಳಾಗಿ ಯಾದಿಯ ಮೊದಲ ಮೂರು ಹೆಸರಾಗಿ ಸೇರಿಸಿದ್ದಾರೆನ್ನಲಾಗಿದೆ. ರಾಜೇಶ್, ಸತ್ತಾರ್, ಅನ್ವರ್ ಕಳೆದ ಬಳಿಕ ಸಂತೋಷ್ ಬಟ್ಟುಂಞಿ, ನಿಯಾಸ್, ರುಖಿಯಾ, ಸುಪ್ರೀಯ ಎಂಬಿವರನ್ನು ಅಭ್ಯರ್ಥಿ ಯಾದಿಯಲ್ಲಿ ಸೇರಿಸಿದ್ದಾರೆ. ಆದರೆ ಸುಪ್ರೀಯ ಈ ಪ್ಯಾನೆಲ್‌ನಿಂದ ಹಿಂಜರಿದಿದ್ದಾರೆ.

ಪ್ರಸ್ತುತ ಮರ್ಚಂಟ್ಸ್ ಅಸೋಸಿ ಯೇಶನ್ ಕಚೇರಿಗೆ ಹೊಂದಿ ಕೊಂಡು ಕಾರ್ಯಾಚರಿಸುತ್ತಿರುವ ಸೊಸೈಟಿ ಯನ್ನು ಇನ್ನೊಂದು ಕೊಠಡಿಗೆ ಬದಲಿ ಸುವುದಕ್ಕೆ ಸಹಕಾರಿ ಜೊಯಿಂಟ್ ರಿಜಿಸ್ಟ್ರಾರ್‌ರ ಅನುಮತಿರಹಿತವಾಗಿ ಸೊಸೈಟಿಯ 15 ಲಕ್ಷ ರೂ.ವನ್ನು ಉಪಯೋ ಗಿಸಿರುವುದು ಸೊಸೈಟಿಯಲ್ಲಿ ಭಿನ್ನಾಭಿ ಪ್ರಾಯಕ್ಕೆ ಕಾರಣವಾಗಿರುವುದು ಎಂದು ಹೇಳಲಾಗುತ್ತಿದೆ. ಈ ವಿಷಯದಲ್ಲಿ ಆಡ ಳಿತ ಸಮಿತಿ ಸದಸ್ಯರಿಂದ, ದೂರುದಾ ರರಿಂದ ಸಹಕಾರಿ ನಿಯಮ 66 ವಿಭಾಗಕ್ಕಾನುಸಾರವಾಗಿ ಹೇಳಿಕೆ ದಾಖಲಿಸಲಾಗಿತ್ತು. 600 ಚದರ ಅಡಿ ವಿಸ್ತೀರ್ಣದಲ್ಲಿರುವ ಕೊಠಡಿಯಲ್ಲಿ ಪೀಠೋಪಕರಣ ಸ್ಥಾಪಿಸಲು, ಭದ್ರತಾ ಕೊಠಡಿಗೆ ಬಾಗಿಲನ್ನು ನಿರ್ಮಿಸಲು ಈ ಮೊತ್ತ ಲೆಕ್ಕ ಹಾಕಿರುವುದಾಗಿ ಇನ್ನೊಂದು ವಿಭಾಗ ಆರೋಪಿಸುತ್ತಿದೆ. ಇದರಲ್ಲಿ 11 ಲಕ್ಷ ರೂ.ವನ್ನು ವೆಚ್ಚ ಮಾಡಲಾಗಿರು ವುದಾಗಿಯೂ ಹೇಳಲಾಗುತ್ತಿದೆ. ಸದಸ್ಯರಲ್ಲದವರಿಗೆ ಸಾಲ ಮಂಜೂರು ಮಾಡಿರುವುದರಲ್ಲಿಯೂ ಆರೋಪವಿದೆ. ಮೃತಪಟ್ಟ ವ್ಯಾಪಾರಿಯ ರಿಸ್ಕ್ ಫಂಡ್ ತಡೆಹಿಡಿದಿರುವುದಾಗಿಯೂ ಸುದ್ದಿಗೋಷ್ಠಿ ಯಲ್ಲಿ ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿ ಮಧ್ಯಪ್ರವೇಶಿಸಿದ ಬಳಿಕ ಸಮಸ್ಯೆ ಪರಿಹರಿಸಿರುವುದಾಗಿ ಮೃತಪಟ್ಟ ವ್ಯಾಪಾರಿ ಯ ಪತ್ನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇನ್ನೊಂದು ಘಟನೆಯಲ್ಲಿ ವ್ಯಾಪಾರಿಗೆ ಹಲ್ಲೆ ಉಂಟಾದಾಗ ಪದಾಧಿಕಾರಿಗಳು ಆರೋಪಿಯ ಜೊತೆ ನಿಂತು ಹಲ್ಲೆಗೀಡಾದ ವ್ಯಾಪಾರಿಯಿಂದ ಹಣ ಪಡೆದು ಒಪ್ಪಂದ ಮಾಡಿರುವು ದಾಗಿಯೂ ಅವರು ಆರೋಪಿಸಿದ್ದಾರೆ. ಈ ಎಲ್ಲಾ ಆರೋಪಗಳ ವಿರುದ್ಧ ಸಹಕಾರಿ ಅಸಿಸ್ಟೆಂಟ್ ರಿಜಿಸ್ಟ್ರಾರ್, ಜೊಯಿಂಟ್ ರಿಜಿಸ್ಟ್ರಾರ್, ಸರಕಾರಿ ಅಂಡರ್ ಸೆಕ್ರಟರಿ ಎಂಬಿವರಿಗೆ ದೂರು ನೀಡಿರುವುದಾಗಿ ಯೂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಿ. ವಿಕ್ರಮ್ ಪೈ, ಬಾಲಕೃಷ್ಣ, ಕೆ. ಗೋಪಾಲಕೃಷ್ಣ ಗಟ್ಟಿ, ಬಿ. ಆಯಿಷ, ಸಾಲಿಮಾರ್ ಅಬ್ದುಲ್ಲ ಎಂ ಬಿವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page