ವಿದ್ಯಾನಗರ ಫ್ಲ್ಯಾಟ್‌ನಲ್ಲಿ ಇಲೆಕ್ಟ್ರಿಕ್ ಶಾರ್ಟ್ ಸರ್ಕ್ಯೂಟ್: ಕಾವಲುಗಾರನ ಸಮಯೋಚಿತ ಪ್ರಜ್ಞೆಯಿಂದ ತಪ್ಪಿದ ಅಪಾಯ

ಕಾಸರಗೋಡು: ವಿದ್ಯಾನಗರದ ಫ್ಲ್ಯಾಟ್ ಸಮುಚ್ಚಯದ ಬೇಸ್‌ಮೆಂಟ್‌ನ ಇಲೆಕ್ಟ್ರಿಕ್ ಪ್ಯಾನಲ್ ಬೋರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾವಲು ಗಾರನ ಸಮಯೋಚಿತ ಮಧ್ಯಪ್ರವೇಶ ದಿಂದಾಗಿ ಭಾರೀ ದುರಂತ ತಪ್ಪಿ ಹೋಗಿದೆ. ನಿನ್ನೆ ರಾತ್ರಿ 7.30ರ ವೇಳೆ ಬೆಂಕಿ ಹಾಗೂ ಹೊಗೆಯನ್ನು ಕಾವಲು ಗಾರ ಕಂಡಿದ್ದರು. ಕೂಡಲೇ ಅಗ್ನಿಶಾ ಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಅಸಿಸ್ಟೆಂಟ್ ಸ್ಟೇಷನ್ ಆಫೀಸರ್ ಎಂ.ಕೆ. ರಾಜೇಶ್ ಕುಮಾರ್‌ರ ನೇತೃತ್ವದಲ್ಲಿ ಕಾಸರಗೋಡಿನಿಂದ ತಲುಪಿದ ಅಗ್ನಿ ಶಾಮಕದಳ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಉಂಟಾಗಿದ್ದ ಬೆಂಕಿ ನಂದಿಸಿ ದ್ದಾರೆ. ಮಾಹಿತಿ ನೀಡಲು ವಿಳಂಬ ವಾಗಿದ್ದರೆ ಭಾರೀ ದುರಂತ ಉಂಟಾಗಬ ಹುದಾಗಿತ್ತೆಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು ೫೦ರಷ್ಟು ಕುಟುಂಬಗಳು ಈ ಫ್ಲ್ಯಾಟ್ ನಲ್ಲಿ ವಾಸಿಸುತ್ತಿದೆ. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ಸತೀಶ್, ಪಿ.ಜಿ. ಜೀವನ್, ಅನೀಶ್ ಮ್ಯಾಥ್ಯು ಮೊದಲಾದವರು ತಂಡದಲ್ಲಿದ್ದರು.

You cannot copy contents of this page