ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಂಘದ ವಿರುದ್ಧ ಆರೋಪ: ಸಾಲಕ್ಕಾಗಿ ಅರ್ಜಿ ಸಲ್ಲಿಸುವ ವಾರಗಳ ಮೊದಲೇ ಸಾಲ ಮಂಜೂರು ಮಾಡಿದ ಆಡಳಿತ ಸಮಿತಿ
ಕುಂಬಳೆ: ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಹಕಾರಿ ಸಂಘದ ಆಡಳಿತ ಸಮಿತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದ ಬಗ್ಗೆ ತನಿಖಾ ತಂಡ ಪತ್ತೆಹಚ್ಚಿದ ಬೆನ್ನಲ್ಲೇ ಇನ್ನಷ್ಟು ಅವ್ಯವಹಾರಗಳು ನಡೆದ ಬಗ್ಗೆ ತಿಳಿದು ಬಂದಿದೆ. ಕಾಲಾವಧಿ ಮುಗಿದ ಸಾಲಗಳಿಗೆ ಅಸಲು ಹಾಗೂ ಬಡ್ಡಿ ಸೇರಿಸಿ ಎಷ್ಟು ಮೊತ್ತವಾಗುವುದೋ ಅಷ್ಟು ಮೊತ್ತವನ್ನು ಸೇರಿಸಿ ಹೊಸ ಸಾಲ ಮಂಜೂರು ಮಾಡಿರುವುದು ಬೆಳಕಿಗೆ ಬಂದಿದೆ. ಸಾಲಗಾರರೊಂದಿಗೆ ಆಡಳಿತ ಸಮಿತಿ ತೋರಿಸಿದ ಮಾನವೀಯತೆ, ಕರುಣೆಯಾಗಿ ಇದನ್ನು ಪರಿಗಣಿಸುವಂತಿಲ್ಲ. ಹೀಗೆ ಪ್ರತೀ ವರ್ಷ ಇದನ್ನೇ ಆವರ್ತಿಸಿದುದರ ಫಲವಾಗಿ ಕಾಲಾವಧಿ ಮುಗಿದ ಸಾಲದ ಮೊತ್ತವನ್ನು ಮರಳಿ ವಸೂಲು ಮಾಡಲು ಸಾಧ್ಯವಾಗದ ಸ್ಥಿತಿ ಉಂಟಾಗಿರುತ್ತದೆ.
ಇದೇ ಸಂದರ್ಭದಲ್ಲಿ ಸಾಲ ಮರು ಪಾವತಿಸಲು ಬಕಿಯಿರುವವರಿಗೆ ಸಹಾಯಕವಾಗಿ ಸರಕಾರ ಘೋಷಿಸುವ ರಿಯಾಯಿತಿಯ ಹೊರತು ಸರಕಾರದಿಂದ ಲಭಿಸುವ ಸಹಾಯ ಮೊತ್ತಕ್ಕೂ ಹೆಚ್ಚನ್ನು ಸಾಲಗಾರರಿಗೆ ಒದಗಿಸಿದೆ. ಸಾಲ ಹಾಗೂ ಬಡ್ಡಿಯನ್ನು ಸೇರಿಸಿ ಹೊಸ ಸಾಲ ಮಂಜೂರು ಮಾಡಲು ಅರ್ಜಿ ಅಥವಾ ಆಡಳಿತ ಸಮಿತಿಯ ನಿರ್ಧಾರ ಕೂಡಾ ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಹಕಾರಿ ಸಂಘಕ್ಕೆ ಅಗತ್ಯವಿರಲಿಲ್ಲವೆಂದೂ ಸಹಕಾರಿ ಇಲಾಖೆ ನಡೆಸಿದ ತನಿಖೆಯಲ್ಲಿ ತಿಳಿದು ಬಂದಿದೆ.
ಸಂಘದಿAದ ಒಂದೂವರೆ ಲಕ್ಷ ರೂಪಾಯಿ ಸಾಲ ತೆಗೆದು ಅದನ್ನು ಮರು ಪಾವತಿಸಲು ಬಾಕಿಯಿದ್ದ ಎಂ.ಟಿ.ಎನ್.ಎ 166ನೇ ನಂಬ್ರದ ಸಾಲಗಾರನಿಗೆ 31-03-2023ರಲ್ಲಿ 1.60 ಲಕ್ಷ ರೂಪಾಯಿ ಸಾಲ ಮತ್ತೆ ಮಂಜೂರು ಮಾಡಲಾಗಿದೆ. ಮೊದಲ ಸಾಲ ಹಾಗೂ ಅದರ ಬಡ್ಡಿ ವಸೂಲು ಮಾಡಲು ಬ್ಯಾಂಕ್ನಲ್ಲಿ ದಾಖಲೆ ಪತ್ರ ತಯಾರಿಸಿಡಲು ಈ ರೀತಿ ಮಾಡಲಾಗಿ ತ್ತೆನ್ನಲಾಗಿದೆ. ಈ ರೀತಿ ಸಾಲ ನೀಡಲು ಆಡಳಿತ ಸಮಿತಿ ನಿರ್ಧರಿಸಿರುವುದು 07-03-2023ರಿಂದಾಗಿತ್ತು. ಸರಿಯಾಗಿ ಹೇಳುವುದಾದರೆ ಸಾಲಕ್ಕೆ ಅರ್ಜಿ ಲಭಿಸುವ ದಿನದ 21 ದಿನ ಮುಂಚೆ ಆಡಳಿತ ಸಮಿತಿ ಸಾಲ ನೀಡಲು ನಿರ್ಧರಿಸಿದೆ.
73ನೇ ನಂಬ್ರದ ಸಾಲಗಾರನಿಗೆ ಸಂಘದಲ್ಲಿ 2 ಲಕ್ಷ ರೂಪಾಯಿ ಸಾಲ ವಿರುವಾಗ ಮತ್ತೆ 3 ಲಕ್ಷ ರೂಪಾಯಿ ಸಾಲ ನೀಡಲಾಗಿದೆ. ಇದಕ್ಕಾಗಿ 21-06-2023ರಂದು ಅರ್ಜಿ ಸಲ್ಲಿಸಲಾ ಗಿತ್ತು. ಅದೇ ದಿನ ಸಾಲ ನೀಡಲಾಗಿತ್ತು. ಆದರೆ ಈ ಸಾಲ ನೀಡಲು ಅರ್ಜಿ ಲಭಿ ಸುವುದರ 1 ವರ್ಷ 2 ತಿಂಗಳ ಮುಂ ಚೆಯೇ ಆಡಳಿತ ಸಮಿತಿ ನಿರ್ಧರಿಸಿ ತ್ತೆಂದು ಬ್ಯಾಂಕ್ನ ದಾಖಲೆಗಳಿಂದ ತನಿಖಾ ತಂಡ ಪತ್ತೆಹಚ್ಚಿದೆ.
2023 ಜೂನ್ 21ರಂದು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 3 ಲಕ್ಷ ರೂಪಾಯಿ ಸಾಲ ನೀಡಲು 2022 ಜೂನ್ 4ರಂದು ಆಡಳಿತ ಸಮಿತಿ ನಿರ್ಧರಿಸಿತ್ತು. 72ನೇ ನಂಬ್ರದ ಸಾಲಗಾರನಿಗೆ 3 ಲಕ್ಷ ರೂಪಾಯಿ 16-06-2022ರಂದು ನೀಡಲಾಗಿದೆ. ಈ ಸಾಲಕ್ಕಾಗಿ ಅರ್ಜಿ ಸಲ್ಲಿಸಿರುವುದು 16-06-2020ರಂದೇ ಆಗಿತ್ತು. ಆದರೆ ಈ ಸಾಲವನ್ನು ನೀಡಲು 04-06-2022ರಂದೇ ಆಡಳಿತ ಸಮಿತಿ ನಿರ್ಧರಿಸಿತ್ತು ಎಂಬುವುದನ್ನು ಬ್ಯಾಂಕ್ನ ದಾಖಲೆಗಳಿಂದ ತಿಳಿದು ಬಂದಿದೆ.
ಸಾಲ ನೀಡಲು ಈ ರೀತಿಯ ಕರುಣೆ ತೋರಿಸಿದ ಬ್ಯಾಂಕ್ನ ಆಡಳಿತ ಸಮಿತಿ ಲಭಿಸಲು ಬಾಕಿಯಿರುವ ಸಾಲದ ಮೊತ್ತವನ್ನು ಕಾನೂನು ವಿರುದ್ಧ ವಾಗಿ ರಿಯಾಯಿತಿ ನೀಡಿದೆಯೆಂದೂ ಅಂತಹ ಸಾಲಗಳ ಮೇಲೆ ಕಡಿತ ಗೊಳಿಸಿದ ಮೊತ್ತವನ್ನು ಕಳೆದು ಬಾಕಿ ಯಿರುವ ಬಡ್ಡಿಯನ್ನು ಅಸಲಿನೊಂದಿಗೆ ಸೇರಿಸಿ ಹೊಸ ಸಾಲ ನೀಡಿರುವುದನ್ನು ತನಿಖಾ ತಂಡ ಪತ್ತೆಹಚ್ಚಿದೆ.
ಏಕ ಕಂತು ಸಾಲ ನಿವಾರಣೆ ಯೋಜನೆ ಪ್ರಕಾರ 104ನೇ ನಂಬ್ರ ಸದಸ್ಯನಾದ ಇಬ್ರಾಹಿಂಗೆ 34068 ರೂಪಾಯಿ ಬಡ್ಡಿಯಲ್ಲಿ ಆಡಳಿತ ಸಮಿತಿ ಕಡಿತಗೊಳಿಸಿದೆ. ಇದು ಸರಕಾರದ ನಿರ್ದೇಶಕ್ಕೆ ವಿರುದ್ಧವಾಗಿತ್ತು. ಸರಕಾರದ ನಿರ್ದೇಶ ಪ್ರಕಾರ ಕಡಿತಗೊಳಿಸಬಹುದಾದ ಮೊತ್ತಕ್ಕಿಂತ 15239 ರೂಪಾಯಿ ಹೆಚ್ಚಿದೆ. 7ನೇ ನಂಬ್ರ ಸದಸ್ಯ ಅಬ್ದುಲ್ ರಹ್ಮಾನ್ರಿಗೆ 54440 ರೂಪಾಯಿ ಬಡ್ಡಿಯಲ್ಲಿ ಕಡಿತಗೊಳಿಸಲಾಗಿದೆ. ಇದರಲ್ಲಿ ಸರಕಾರದ ನಿರ್ದೇಶಕ್ಕಿಂತ 19399 ರೂಪಾಯಿ ಹೆಚ್ಚಿದೆ. 216ನೇ ನಂಬ್ರದ ಸದಸ್ಯ ಅಬ್ದುಲ್ಲರಿಗೆ 39008 ರೂಪಾಯಿ ಕಡಿತಗೊಳಿಸಲಾಗಿದೆ. ಇದು ಕೂಡಾ ಸರಕಾರದ ವ್ಯವಸ್ಥೆಗಿಂತ 20777 ರೂ. ಹೆಚ್ಚಿದೆ. ಜನರು ನೀಡುವ ಹಣದ ಪ್ರಯೋಜನವನ್ನು ಸಂಘದ ಸದಸ್ಯರು ಈ ರೀತಿಯಲ್ಲೂ ಪಡೆದುಕೊಂಡಿದ್ದಾರೆ.