ಕುಂಬಳೆ: ವ್ಯಾಪಾರಿ ನಿಧನ

ಕುಂಬಳೆ: ಕುಂಬಳೆಯಲ್ಲಿ ವ್ಯಾಪಾರಿಯಾಗಿದ್ದು ಕುಂಟಂಗೇರಡ್ಕ ನಿವಾಸಿ ಕೂಡ್ ಅಬೂಬಕರ್ (80) ಎಂಬ ವರು ನಿಧನ ಹೊಂದಿದರು. ಕುಂಬಳೆ ಪೇಟೆಯಲ್ಲಿ ಹಲವು ವರ್ಷಗಳಿಂದ ಇವರು ಫೋಟೋಗಳಿಗೆ ಫ್ರೇಮ್ ಅಳವಡಿಸುವ ಅಂಗಡಿ ನಡೆಸುತ್ತಿದ್ದರು. ಇಂದು ಮುಂ ಜಾನೆ ಮನೆಯಲ್ಲಿ ನಿಧನ ಸಂಭವಿಸಿದೆ. ಇವರ ಪತ್ನಿ ಸೈನಬ ಆರು ತಿಂಗಳ ಹಿಂದೆಯಷ್ಟೇ ನಿಧನ ಹೊಂದಿದ್ದರು. ಮೃತರು ಪುತ್ರಿ ಫೌಸಿ, ಅಳಿಯ ಅಸೀಸ್, ಸಹೋದರಿಯರಾದ ಬೀವಿ, ಮರಿಯ, ಆಸಿಯ, ಸೈನಬ, ಆಯಿಶ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

You cannot copy contents of this page