ಕುಂಬಳೆ: ಸಂಕಯ್ಯ ಭಂಡಾರಿ ಸಂಸ್ಮರಣೆ
ಕುಂಬಳೆ: ಬಿಜೆಪಿ ಪಂ. ಸಮಿತಿ ಆಶ್ರಯದಲ್ಲಿ ದಿ| ಸಂಕಯ್ಯ ಭಂಡಾರಿಯವರ ಪುಣ್ಯಸ್ಮರಣೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಆಚರಿಸಲಾಯಿತು. ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯ ವಿ. ರವೀಂದ್ರನ್ ಉದ್ಘಾಟಿಸಿದರು. ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಸುರೇಶ್ ಕುಮಾರ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್ ಮಯ್ಯ, ಪ್ರದೀಪ್ ಆರಿಕ್ಕಾಡಿ, ಪ್ರೇಮಲತಾ ಎಸ್, ಕೆ. ಸುಧಾಕರ ಕಾಮತ್, ಅವಿನಾಶ್ ಕಾರಂತ್, ಅಜಿತ್ ಕುಮಾರ್, ಜನಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸಿದರು. ಪ್ರೇಮಾವತಿ ಸ್ವಾಗತಿಸಿ, ಶಶಿ ಕುಂಬಳೆ ವಂದಿಸಿದರು.