ಕುಂಬ್ಡಾಜೆ ಗ್ರಾಮ ಕಚೇರಿಯಲ್ಲಿ ನೌಕರರ ನೇಮಕಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಮವ್ವಾರು: ಕುಂಬ್ಡಾಜೆ ಗ್ರಾಮ ಕಚೇರಿಯಲ್ಲಿ ಉದ್ಯೋಗಸ್ಥರನ್ನು ನೇಮಿಸದ ಸರಕಾರಿ ಇಲಾಖೆಯ ಧೋರಣೆಯ ವಿರುದ್ಧ ಭಾರತೀಯ ಜನತಾ ಪಕ್ಷದ ಕುಂಬ್ಡಾಜೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಮಾರ್ಪನಡ್ಕದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ದೇಶೀಯ ಸಮಿತಿ ಸದಸ್ಯ ಎಂ. ಸಂಜೀವ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಸ್ಮಾರ್ಟ್ ಗ್ರಾಮಕಚೇರಿಯನ್ನು ಸ್ಥಾಪಿಸಿ ಉದ್ಯೋಗಸ್ಥರನ್ನು ನೇಮಿಸದೆ ಸರಕಾರ ಜನತೆಯನ್ನು ವಂಚಿಸಿದೆ. ತ್ರಿಪುರ ಮತ್ತು ಪಶ್ಚಿಮ ಬಂಗಾಳದಲ್ಲಿ ಇದೇ ರೀತಿಯ ಕಾರ್ಯಗಳನ್ನು ಮಾಡಿದ ಸಿಪಿಎಂ ಪಕ್ಷವು ಇಂದು ಅಸ್ತಿತ್ವದಲ್ಲಿಲ್ಲದಂ ತಾಗಿದೆ. ಕೇವಲ ಸ್ಮಾರ್ಟ್ಕಚೇರಿ ಜನತೆಗೆ ಏನನ್ನೂ ನೀಡುವುದಿಲ್ಲ. ಬದಲಾಗಿ ಅಲ್ಲಿ ಅಗತ್ಯ ನೌಕರರು ಇರಬೇಕು. ಆದರೆ ನೇಮಕಾತಿ ನಡೆಸದೆ ಸರಕಾರ ಜನತೆಗೆ ದ್ರೋಹ ಬಗೆದಿದೆ ಎಂದು ಅವರು ಆರೋಪಿಸಿದರು.
ಕುಂಬ್ಡಾಜೆ ಪಂಚಾಯತ್ ಸಮಿತಿ ಅಧ್ಯಕ್ಷ ಹರೀಶ್ ಗೋಸಾಡ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಮನೆಗಳು ಮಂಜೂರುಗೊAಡ ಫಲಾನುಭವಿ ಗಳಿಗೆ ಅಗತ್ಯ ದಾಖಲೆಗಳಿಗೆ ಪರದಾಡುವ ಪರಿಸ್ಥಿತಿ ಸರಕಾರವು ನಿರ್ಮಿಸಿದೆ ಎಂದರು. ಜಿಲ್ಲಾ ಉಪಾಧ್ಯಕ್ಷ ಎಂ. ಸುಧಾಮ ಗೋಸಾಡ, ಮಂಡಲ ಉಪಾಧ್ಯಕ್ಷ ಕೃಷ್ಣಶರ್ಮ ಜಿ., ನಳಿನಿ ಕೆ., ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಜಿಲ್ಲಾಪಂಚಾಯತ್ ಸದಸ್ಯೆ ಶೈಲಜಾ ಭಟ್, ಮಹಿಳ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಯಶೋಧ ಎಂ., ಪಂಚಾಯತ್ ಸಮಿತಿ ಪ್ರಮುಖರು, ಜನಪ್ರತಿನಿಧಿಗಳು, ಬೂತ್ ಕಾರ್ಯಕರ್ತರು ಪಾಲ್ಗೊಂಡಿ ದ್ದರು. ಶಶಿಧರ ತೆಕ್ಕೆಮೂಲೆ ಸ್ವಾಗತಿಸಿ, ರೋಶಿನಿ ಪೊಡಿಪ್ಪಳ್ಳ ವಂದಿಸಿದರು.