ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅಭಿಮಾನಿ ಸೇವಾ ಬಳಗ ಸಭೆ
ಉಪ್ಪಳ: ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅಭಿಮಾನಿ ಸೇವಾ ಬಳಗ ಕೇಂದ್ರ ಸಮಿತಿಯ ಸಭೆ ಹೊಸಂಗಡಿ ಪ್ರೇರಣ ಹಾಲ್‌ನಲ್ಲಿ ನಡೆಯಿತು. ಕಾಸರಗೋಡು ಜಿಲ್ಲೆ ಹಾಗೂ ಉಳ್ಳಾಲ ವಲಯದ ಅಭಿಮಾನಿ ಬಾಂಧವರು ಸಭೆಯಲ್ಲಿ ಉಪಸ್ಥಿತರಿದ್ದರು. ಕೇಂದ್ರ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ರೂಪೀಕರಣದ ಬಗ್ಗೆ ಚರ್ಚಿಸಲಾಯಿತು. ನಾರಾಯಣ ನಾÊಕ್ ನಡುಹಿತ್ಲು ಸೇವಾ ಬಳಗದ ಕೇಂದ್ರ ಸಮಿತಿಯ ಕಾರ್ಯಗಳ ಬಗ್ಗೆ ವಿವರಿಸಿದರು. ಜಯರಾಜ್ ಶೆಟ್ಟಿ ಚಾರ್ಲ ಸ್ವಾಗತಿಸಿ, ಸುರೇಶ್ ಶೆಟ್ಟಿ ಪರಂಕಿಲ ವಂದಿಸಿದರು.