ಕೂಲಿ ಕಾರ್ಮಿಕ ನಾಪತ್ತೆ
ಕಾಸರಗೋಡು: ಮುಟ್ಟತ್ತೋಡಿ ಮಿನಿ ಎಸ್ಟೇಟ್ ತೆಕ್ಕೇಮೂಲೆ ಹೌಸ್ ನ ಅಂಬಾಡಿ ಎಂಬವರ ಪುತ್ರ, ಕೂಲಿ ಕಾರ್ಮಿಕ ರಾಮ ಎ (೫೩) ಎಂಬವರು ನಾಪತ್ತೆಯಾಗಿರುವುದಾಗಿ ಸಹೋದರ ಈಶ್ವರ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಾರ್ಚ್ ೨ರಂದು ಬೆಳಿಗ್ಗೆ ಕೆಲಸಕ್ಕೆ ಹೋದ ರಾಮ ಬಳಿಕ ಮನೆಗೆ ಹಿಂತಿರುಗಿಲ್ಲವೆಂದು ದೂರನಲ್ಲಿ ತಿಳಿಸಲಾಗಿದೆ. ಇವರು ಕೆಲವೊಮ್ಮೆ ಕೆಲಸಕ್ಕೆಂದು ತಿಳಿಸಿ ಹೋದರೆ ದಿನಗಳ ಬಳಿಕ ಮನೆಗೆ ಹಿಂತಿರುಗುತ್ತಿದ್ದರು. ಆದರೆ ಈಗ ಅವರು ಮನೆಯಿಂದ ಹೊರಹೋಗಿ ಎರಡು ವಾರ ಕಳೆದರೂ ಹಿಂತಿರುಗಿಲ್ಲವೆಂದು ಸಹೋದರ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.