ಕೆಲವೆಡೆ ಸುರಿದ ಬೇಸಿಗೆ ಮಳೆ

ಕಾಸರಗೋಡು: ಬೇಸಿಗೆಯ ಬೇಗೆಯಿಂದ ಜನರು ತತ್ತರಿಸಿರು ವಾಗಲೇ ಜಿಲ್ಲೆಯ ಕೆಲವೆಡೆ ಇಂದು ಬೆಳಿಗ್ಗೆ  ಮಳೆ ಸುರಿಯಿತು. ಇದು ಅಲ್ಪ ತಂಪನ್ನೆರಚಿತು. ಇಂದು ಬೆಳಿಗ್ಗೆ ಉಪ್ಪಳ, ಮಂಗ ಲ್ಪಾಡಿ, ಸೋಂಕಾಲ್ ಭಾಗಗಳಲ್ಲಿ ಉತ್ತಮ ಮಳೆ ಸುರಿಯಿತು. ಇದೇ ವೇಳೆ ಮಳೆ ಸುರಿದೊಡನೆ ಉಪ್ಪಳ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ಕೆಸರುಮಯವಾಯಿತು. ಕಾಸರಗೋಡಿನಿಂದ ಮಂಗಳೂರು ಭಾಗಕ್ಕೆ  ತೆರಳುವ ಸರ್ವಿಸ್ ರಸ್ತೆಯಲ್ಲಿ ಮಳೆ ನೀರು ತುಂಬಿಕೊಂಡು ಸಂಚಾರಕ್ಕೂ ಅಡಚಣೆ ಸೃಷ್ಟಿಯಾಯಿತು. ಇದೇ ವೇಳೆ ಜಿಲ್ಲೆಯ ಕೆಲವು ಭಾಗಗಳಲ್ಲಿ ತುಂತುರು ಮಳೆ ಸುರಿಯಿತು. ಬೇಸಿಗೆ ಮಳೆಗೆ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ಮೂಲಗಳು ಇತ್ತೀಚೆಗೆ ವರದಿ ನೀಡಿದ್ದವು. ಬೇಸಿಗೆ ಮಳೆ ಸುರಿದರೂ ಈಗಿನ ಉಷ್ಣತೆ ಕಡಿಮೆಯಾಗದೆಂದೂ ತಜ್ಞರು ತಿಳಿಸುತ್ತಿದ್ದಾರೆ.

RELATED NEWS

You cannot copy contents of this page