ಕುಂಬಳೆ: ಕೆಂಪು ಮಣ್ಣು ಸಾಗಾಟ ನಡೆಸಿದ ಎರಡು ಟಿಪ್ಪರ್ ಲಾರಿಗಳು ಹಾಗೂ ಜೆಸಿಬಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಾಲಕರಾದ ಕಯ್ಯೂರಿನ ಕೃಷ್ಣ (೪೨), ಪೈವಳಿಕೆಯ ಕಲಂದರ್ (೩೫), ಸುರತ್ಕಲ್‌ನ ನವಾಸ್ (೩೫) ಎಂಬಿವರನ್ನು ಬಂಧಿಸ ಲಾಗಿದೆ. ಎಸ್.ಐ. ಉಮೇಶ್‌ರ ನೇತೃತ್ವದಲ್ಲಿ ವಾಹನಗಳು ಹಾಗೂ ಆರೋಪಿಗಳನ್ನು ಸೆರೆಹಿಡಿಯಲಾಗಿದೆ.