ಕೇರಳೀಯಂ ಮಹೋತ್ಸವಕ್ಕೆ ಚಾಲನೆ
ತಿರುವನಂತಪುರ: ಕೇರಳ ರಾಜ್ಯ ಸಂಸ್ಥಾಪನಾ ದಿನವಾದ ನವೆಂಬರ್ ೧ನ್ನು ಇಂದು ರಾಜ್ಯದಾದ್ಯಂತವಾಗಿ ಸರಕಾರಿ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ.
ಇದರ ಅಂಗವಾಗಿ ಏರ್ಪಡಿಸಲಾದ ಕೇರಳೀಯಂ ಮಹೋತ್ಸವಕ್ಕೆ ತಿರುವನಂತಪುರ ಸೆಂಟ್ರಲ್ ಸ್ಟೇಡಿಯಂನಲ್ಲಿ ಇಂದು ಬೆಳಿಗ್ಗೆ ನಡೆದ ಅದ್ದೂರಿಯ ಹಾಗೂ ವರ್ಣರಂಜಿತ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ದೀಪ ಪ್ರಜ್ವಲನೆಗೊಳಿಸಿ ಉದ್ಘಾಟಿಸಿ ಮಾತನಾಡಿದರು. ಇಂದು ಆರಂಭಗೊಂಡ ಈ ಮಹೋತ್ಸವ ನವೆಂಬರ್ ೭ರ ತನಕ ಮುಂದುವರಿಯಲಿದೆ. ಒಟ್ಟು ೪೨ ವೇದಿಕೆಗಳಲ್ಲಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ಇದರಲ್ಲಿ ವಿಚಾರ ಸಂಕಿರಣ, ವಸ್ತುಪ್ರದರ್ಶನಗಳು, ೩೦ಕ್ಕಿಂತ ಹೆಚ್ಚು ಇನ್ಸ್ಟಲೇಷನ್ಗಳು, ೪೧೦೦ಕ್ಕೂ ಹೆಚ್ಚು ಕಲಾವಿದರು, ೬೦೦ರಷ್ಟು ಉದ್ಯಮಶೀಲರು, ಹೂ- ಪ್ರದರ್ಶನ, ಸಿನೆಮಾ, ಉದ್ದಿಮೆ ಥೀಮ್ ಇಲ್ಯೂಮಿನೇಷನ್ ಹಾಗೂ ಪ್ರದರ್ಶನ ಹಾಗೂ ಮಾರಾಟ ಮೇಳಗಳೂ ನಡೆಯುತ್ತಿದೆ.