ಕೇರಳ ಕಾಂಗ್ರೆಸ್ ಡೆಮೋಕ್ರಾಟಿಕ್ ಪಕ್ಷಕ್ಕೆ ರೂಪು; ಎನ್‌ಡಿಎಗೆ ಸೇರ್ಪಡೆ

ಕೋಟ್ಟಯಂ: ಲೋಕಸಭಾ ಚುನಾವಣೆ ಸಮಯದಲ್ಲೇ ಯುಡಿ ಎಫ್ ಘಟಕ ಪಕ್ಷವಾದ ಕೇರಳ ಕಾಂಗ್ರೆಸ್‌ನ ಪಿ.ಜೆ. ಜೋಸೆಫ್‌ರ ಬಣ ಮತ್ತೆ ಇಬ್ಬಾಗಗೊಂಡು ಆ ಪಕ್ಷದ ಹಿರಿಯ ನೇತಾರ ಸಜಿ ಮಂಞ ಕಡಂಬಿಲ್   ನೇತೃತ್ವದಲ್ಲಿ ಕೇರಳ ಕಾಂಗ್ರೆಸ್ ಡೆಮೋಕ್ರಾಟಿಕ್ ಎಂಬ ಹೊಸ ರಾಜಕೀಯ ಪಕ್ಷಕ್ಕೆ ರೂಪು ನೀಡಲಾಗಿದೆ. ಮಾತ್ರವಲ್ಲ ಅದು ಬಿಜೆಪಿ ನೇತೃತ್ವ ದ ಎನ್‌ಡಿಎ ಘಟಕ ಪಕ್ಷವಾಗಿ ಸೇರ್ಪಡೆಗೊಂಡಿದೆ.

ಹೊಸ ಪಕ್ಷ ರೂಪೀಕರಣ ಸಭೆಯಲ್ಲಿ ಕೋಟ್ಟಯಂ ಲೋಕಸಭಾ ಕ್ಷೇತ್ರದ ಎನ್‌ಡಿಎ ಉಮೇದ್ವಾರ ತುಷಾರ್  ವೆಳ್ಳಾಪಳ್ಳಿ ಯವರೂ ಭಾಗವಹಿಸಿ ದರು. ಸಜಿ ಮಂಞಕಡಂಬಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಹೊಸದಾಗಿ ರೂಪೀಕರಿಸಲಾದ  ಕೇರಳ ಕಾಂಗ್ರೆಸ್ ಡೆಮೋಕ್ರಾಟಿಕ್ ಪಕ್ಷದ  ರಾಜ್ಯ ಅಧ್ಯಕ್ಷರಾಗಿ ಸಜಿ ಮಂಞಕಡಂಬಿಲ್‌ರನ್ನೂ ಕಾರ್ಯ ನಿರ್ವಹಣಾ ಅಧ್ಯಕ್ಷರನ್ನಾಗಿ, ಡಿ. ದಿನೇಶ್ ಕರ್ತಾರನ್ನು  ಆರಿಸಲಾಯಿ ತು. ಮಾತ್ರವಲ್ಲ ಇತರ ಹಲವು ಪದಾಧಿಕಾರಿಗಳನ್ನು ಆರಿಸಲಾಗಿದೆ.

ಈ ಹೊಸ ಪಕ್ಷವಾದ ಕೇರಳ ಕಾಂಗ್ರೆಸ್ ಡೆಮೋಕ್ರಾಟಿಕ್ ಬೆಂಬಲ ದಿಂದಾಗಿ  ಕೋಟ್ಟಯಂ ಮಾತ್ರವಲ್ಲ ಪತ್ತನಂತಿಟ್ಟ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಎನ್‌ಡಿಎ ಉಮೇದ್ವಾ ರರಿಗೆ ಆನೆ ಬಲ ಬಂದಂತಾಗಿದೆ. ಚುನಾವಣೆ ವೇಳೆಯಲ್ಲೇ ಕೇರಳ ಕಾಂಗ್ರೆಸ್ ಇಬ್ಭಾಗಗೊಂಡಿರುವುದು ಯುಡಿಎಫ್‌ಗೆ ತಲ್ಲಣಗೊಳಿಸಿದೆ.

RELATED NEWS

You cannot copy contents of this page