ಕೇರಳ ಮರಾಟಿ ಸಂರಕ್ಷಣ ಸಮಿತಿ ಸಭೆ, ನೂತನ ಪದಾಧಿಕಾರಿಗಳ ಆಯ್ಕೆ
ಕೇರಳ ಮಾರಾಟಿ ಸಂರಕ್ಷಣಾ ಸಮಿತಿ ಮಹಾಸಭೆ ಪಿಲÁಂಕಟ್ಟೆ ಮಾರಾಟಿ ಸಭಾ ಭವನ ಬಳಿ ನಡೆಯಿತು. ಬೆಂಗಳೂರು ಮಾರಾಟಿ ಸಮಿತಿ ನೇತಾರೆ ಚಂದ್ರ ಮತಿ ಉದ್ಘಾಟಿಸಿ, ಮಾತನಾಡಿ ವಿದ್ಯಾ ರ್ಥಿಗಳು ವಿದ್ಯಾಭ್ಯಾಸ ವಲಯದಲ್ಲಿ ಉತ್ತಮವಾಗಿ ಕಲಿತು ಜೀವನ ವನ್ನು ರೂಪಿಸಬೇಕೆಂದು ಕರೆ ನೀಡಿದರು. ಪಿಲÁಂಕಟ್ಟೆಯಲ್ಲಿ ನಿರ್ಮಾಣಗೊಳ್ಳುವ ಸಭಾ ಭವನದ ಕೆಲಸ ಅತೀ ಶೀಘ್ರದಲ್ಲಿ ನಡೆಸಲು ಸಮಾಜದ ಪ್ರತಿಯೊಬ್ಬರೂ ಕೂಡ ಮುಂದೆ ನಿಂತು ಶ್ರಮಿಸಬೇಕಾಗಿ ತಿಳಿಸಿದರು. ಸಮಿತಿಯ ಅಧ್ಯಕ್ಷ ಸುಬ್ರಾಯ ನಾಯ್ಕ್ ಟಿ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಮಾಜಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಮಾಯಿಲ ನಾಯ್ಕ್, ವಿಠ್ಠಲ್ ನಾಯ್ಕ್, ರಾಮ ನಾಯ್ಕ್, ವಿಶ್ವನಾಥ್ ನಾಯ್ಕ್ ಬಿ, ಗಂಗಾಧರ ನೀರ್ಚಾಲು, ಗೋಪಾಲ, ಗೋಪಾಲ ಪಟÁ್ಟಜೆ, ಪುಟ್ಟ ನಾಯ್ಕ್ ಚೇರಾಲ್. ರಾಧಾಕೃಷ್ಣ ಪೈಕ. ಶಂಕರ ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ನೀರ್ಚಾಲ್ ಸ್ವಾಗತಿಸಿ, ಯುವ ಸಮಿತಿ ಅಧ್ಯಕ್ಷ ಚಂದ್ರ ಶೇಖರ್ ವಂದಿಸಿದರು. ನೂತನ ಸಮಿತಿಗೆ ಅಧ್ಯಕ್ಷರಾಗಿ ಶ್ಯಾಮ ಪ್ರಸಾದ್ ಮಾನ್ಯ, ಕಾರ್ಯದರ್ಶಿಯಾಗಿ ಬಾಲಕೃಷ್ಣ ನೀರ್ಚಾಲು, ಕೋಶಾ ಧಿಕಾರಿಯಾಗಿ ಮÁಯಿಲ ನಾಯ್ಕ್ ಪೆರ್ಲ ಹಾಗೂ ೩೫ ಜನರ ಸಂರ ಕ್ಷಣಾ ಸಮಿತಿ ರೂಪೀಕರಿಸಲÁಯಿತು.