ಕೊಂಡೆವೂರಿನಲ್ಲಿ ಅತಿಥಿ ಗೃಹ ವಿಶ್ವಂ ಉದ್ಘಾಟನೆ
ಉಪ್ಪಳ: ಕಷ್ಟಗಳಿಗೆ ಸ್ಪಂದಿಸುವ ಹೃದಯ ಗುರುತಿಸಲ್ಪಡುತ್ತದೆ. ಎಲ್ಲರೂ ಒಂದಾದರೆ ಮಾತ್ರ ಧರ್ಮಕೇಂದ್ರ ಬೆಳೆಯಲು ಸಾಧ್ಯ. ಉಳ್ಳವರು ಇಲ್ಲದವರಿಗೆ ನೀಡಿದಾಗ ಸಮಾಜ ಸಮತೋಲನದಿಂದಿರಲು ಸಾಧ್ಯ ಎಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕೊಂಡೆವೂರು ಶ್ರೀಮಠದಲ್ಲಿ ನೂತನವಾಗಿ ನಿರ್ಮಿಸಿದ “ವಿಶ್ವಂ” ಅತಿಥಿಗೃಹವನ್ನು ಉದ್ಘಾಟಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಕೇಂದ್ರ ಸಚಿವ ಶ್ರೀಪಾದ ಯಸ್ಸೋ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬದುಕಿನ ಜಂಜಡಗಳ ಮಧ್ಯೆ ಆಧ್ಯಾತ್ಮಿಕ ಅನುಭೂತಿ ಸಾಧ್ಯವಾಗಬೇಕು. ಈ ನಿಟ್ಟಿನಲ್ಲಿ ಕೊಂಡೆವೂರು ಶ್ರೀಮಠ ರಾಷ್ಟçದಲ್ಲೇ ಗುರುತಿಸಲ್ಪಟ್ಟ ಆಧ್ಯಾತ್ಮಿಕ, ಧಾರ್ಮಿಕದ ಜೊತೆಗೆ ಆಶ್ರಿತರಿಗೆ ಆಸರೆಯಾಗಿ ಬೆಂಬಲ ನೀಡುವ ಕೇಂದ್ರವಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಕೇಂದ್ರ ಮಾಜಿ ಸಚಿವ, ಒರಿಸ್ಸಾದ ಬಾಲಸೋರ್ ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಉಪಸ್ಥಿತರಿದ್ದು ಶ್ರೀಮಠದ ನೂತನ ವೆಬ್‌ಸೈಟ್‌ನ್ನು ಉದ್ಘಾಟಿಸಿದರು.
ರಾಜ್ಯ ಸಭಾ ಸದಸ್ಯ ಕೆ. ನಾರಾ ಯಣ. ಬೆಂಗಳೂರು, ಮಾಜಿ ರಾಜ್ಯ ಸಭಾ ಸದಸ್ಯ ಡಾ. ಕೆ.ಸಿ ರಾಮಮೂರ್ತಿ ಬೆಂಗಳೂರು, ಯತಿ ವಿನಯಸಾಗರ್ ಉಜ್ಜೆöÊನಿ, ಉದ್ಯಮಿ ರಘುರಾಮ ಶೆಟ್ಟಿ ಮುಂಬೈ, ಎ.ಜೆ ಶೇಖರ್ ಉಪಸ್ಥಿತರಿದ್ದು ಮಾತನಾಡಿದರು.
ಈ ಸಂದರ್ಭದಲ್ಲಿ ಧಾರ್ಮಿಕ, ಸಾಮಾಜಿಕ ಮುಂದಾಳುಗಳಾದ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಕೆ.ಕೆ. ಶೆಟ್ಟಿ, ಉದ್ಯಮಿ ವಿಶ್ವನಾಥ್ ವೇಂಗರ ಇವರನ್ನು ಸನ್ಮಾನಿಸಲಾಯಿತು.
ಆಶ್ರಮದ ಟ್ರಸ್ಟಿ, ಕರ್ನಾಟಕ ವಿಧಾನ ಪರಿಷತ್ತು ಮಾಜಿ ಸದಸ್ಯ ಮೋನಪ್ಪ ಭಂಡಾರಿ ಸ್ವಾಗತಿಸಿದರು. ವಿಧಾನ ಪರಿಷತ್ತು ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ.ಸಾ.ಪ ಜಿಲ್ಲಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ವಂದಿಸಿದರು. ಅರವಿಂದಾಕ್ಷ ಭಂಡಾರಿ, ವಕೀಲ ಗಂಗಾಧರ ಕೊಂಡೆವೂರು, ಅಶೋಕ ಬಾಡೂರು ಹಾಗೂ ಪ್ರಶೌನ್ ಕಣ್ಣೂರು ನಿರೂಪಿಸಿದರು. ಅಪರಾಹ್ನ ಸವಿಜೀವನಂ ನೃತ್ಯಕಲಾ ಕ್ಷೇತ್ರ ಕೊಂಡೆವೂರು, ಇದರ ವಿದುಷಿ ಸವಿತಾಜೀವನ್ ಮತ್ತು ಶಿಷ್ಯ ವೃಂದದವರಿAದ ನೃತ್ಯ ವೈಭವ ನಡೆಯಿತು. ಸಂಜೆ ನಕ್ಷತ್ರನವದಲ್ಲಿ ನವಗ್ರಹ ಪೂಜೆ ಮತ್ತು ದೀಪೋತ್ಸವ ನಡೆಯಿತು. ಇದಕ್ಕೂ ಮೊದಲು ಬ್ರಹ್ಮಶ್ರೀ ಕಮಲಾದೇವೀ ಪ್ರಸಾದ ಆಸ್ರಣ್ಣರವರ ಆಚಾರ್ಯತ್ವದಲ್ಲಿ ಶ್ರೀಲಕ್ಷಿನಾರಾಯಣ ಹೃದಯ ಹೋಮ, ಅನ್ನ ಸಂತರ್ಪಣೆ ನಡೆಯಿತು.