ಕೊಪ್ಪಳ ಹೊಳೆಯಲ್ಲಿ ಪತ್ತೆಯಾದ ಮೃತದೇಹ ಮಂಗಳೂರಿನ ವೈದ್ಯಕೀಯ ವಿದ್ಯಾರ್ಥಿಯದ್ದು
ಮಂಜೇಶ್ವರ: ಹೊಸಬೆಟ್ಟು ಬಳಿಯ ಕೊಪ್ಪಳ ಹೊಳೆಯಲ್ಲಿ ಇತ್ತೀಚೆಗೆ ಪತ್ತೆಯಾದ ಮೃತದೇಹ ಸುರತ್ಕಲ್ ಬಳಿಯ ನಿವಾಸಿಯಾದ ವೈದ್ಯಕೀಯ ವಿದ್ಯಾರ್ಥಿಯಾಗಿ ದ್ದಾರೆಂದು ದೃಢೀಕರಿಸಲಾಗಿದೆ.
ಸುರತ್ಕಲ್ ಬಳಿಯ ಕಾಟಿಪಳ್ಳ ನಿವಾಸಿ ಅಬೂಬಕರ್ ಎಂಬವರ ಪುತ್ರ ಇಹಾಬ್ (೨೦) ಮೃತ ವ್ಯಕಿ ಯೆಂದು ತಿಳಿದುಬಂದಿದೆ. ಕಾಸರ ಗೋಡು ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ಸಂಬಂಧಿಕರು ಮೃತದೇಹ ಇಹಾಬ್‌ನದ್ದೆಂದು ದೃಢೀಕರಿಸಿದ್ದಾರೆ. ಬಳಿಕ ಮೃತದೇಹವನ್ನು ಊರಿಗೆ ಕೊಂಡೊಯ್ಯಲಾಗಿದೆ.
ಮಂಗಳೂರಿನ ಕಾಲೇಜೊಂ ದರಲ್ಲಿ ದ್ವಿತೀಯ ವರ್ಷ ಮೆಡಿಕಲ್ ವಿದ್ಯಾರ್ಥಿಯಾದ ಇಹಾಬ್ ಕೆಲವು ದಿನಗಳಹಿಂದೆ ತಲಪ್ಪಾಡಿಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಅನಂತರ ಅಲ್ಲಿಂದ ಅವರು ನಾಪತ್ತೆಯಾಗಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಇದರಂತೆ ಶೋಧ ನಡೆಯುತ್ತಿರುವ ಮಧ್ಯೆ ಎರಡು ದಿನಗಳ ಹಿಂದೆ ಕೊಪ್ಪಳ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಆದರೆ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗದ ಹಿನ್ನೆಲೆಯಲ್ಲಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಗಿತ್ತು. ಈ ಬಗ್ಗೆ ತಿಳಿದ ಸಂಬಂಧಿಕರು ಕಾಸರ ಗೋಡಿಗೆ ತಲುಪಿ ಮೃತದೇಹದ ಗುರುತುಹಚ್ಚಿದ್ದಾರೆ.
ಮೃತದೇಹ ಪೂರ್ಣ ನಗ್ನ ಸ್ಥಿತಿಯಲ್ಲಿತ್ತು. ಆದರೆ ಇಹಾಬ್ ಹೊಳೆಗೆ ಬಿದ್ದು ಸಾವಿಗೀಡಾಗಲು ಕಾರಣವೇನೆಂದು ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ.