ಕೊಯಿಪ್ಪಾಡಿಯಲ್ಲಿ ರಸ್ತೆಗೆ ಬಿದ್ದ ವಿದ್ಯುತ್ ಕಂಬಗಳು: ತಪ್ಪಿದ ಭಾರೀ ದುರಂತ
ಕುಂಬಳೆ: ಕೊಯಿಪ್ಪಾಡಿ ಕಡಪ್ಪುರದಲ್ಲಿ ಇಂದು ಬೆಳಿಗ್ಗೆ ನಾಲ್ಕು ವಿದ್ಯುತ್ ಕಂಬಗಳು ತುಂಡಾಗಿ ರಸ್ತೆಗೆ ಬಿದ್ದಿದ್ದು, ಅದೃಷ್ಟವಶಾತ್ ಭಾರೀ ದುರಂತ ತಪ್ಪಿಹೋಗಿದೆ.
ಇಂದು ಬೆಳಿಗ್ಗೆ ಭಾರೀ ಗಾಳಿ, ಮಳೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಜನರು ಹಾಗೂ ವಾಹನ ಸಂಚಾರ ಇಲ್ಲದುದರಿಂದ ಯಾವುದೇ ಅಪಾಯವುಂಟಾಗಿಲ್ಲ. ವಿದ್ಯಾರ್ಥಿಗಳ ಸಹಿತ ಒಂದು ಶಾಲಾ ಬಸ್ ಹಾಗೂ ಆಟೋ ರಿಕ್ಷಾ ಸಂಚರಿಸಿದ ಅಲ್ಪ ಹೊತ್ತಿನಲ್ಲೇ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಘಟನೆಯಿಂದಾಗಿ ಅಲ್ಪ ಹೊತ್ತು ಸಾರಿಗೆ ಅಡಚಣೆ ಸೃಷ್ಟಿಯಾಯಿತು. ಬಳಿಕ ತಲುಪಿದ ನಾಗರಿಕರು ಕಂಬಗಳನ್ನು ರಸ್ತೆಯಿಂದ ತೆರವುಗೊಳಿಸಿದರು. ಕೊಯಿಪ್ಪಾಡಿ ಕಡಪ್ಪುರ ಜಂಕ್ಷನ್‌ನಿಂದ ಕೊಯಿಪ್ಪಾ ಡಿ ಕಡಪ್ಪುರ ಕೋಡಿ ಎಂಬಲ್ಲಿಗೆ ತೆರಳುವ ರಸ್ತೆ ಬದಿ ಐದು ತಿಂಗಳ ಹಿಂದೆಯಷ್ಟೇ ಈ ಕಂಬಗಳನ್ನು ಸ್ಥಾಪಿಸಲಾಗಿತ್ತು. ಕಂಬಗಳನ್ನು ಸ್ಥಾಪಿಸುವುದ ರಲ್ಲಿ ಉಂಟಾದ ಲೋಪವೇ ಇವು ಈಗ ಮುರಿದು ಬೀಳಲು ಕಾರಣವೆಂದು ನಾಗರಿಕರು ಆರೋಪಿಸುತ್ತಿದ್ದಾರೆ.