ಕೋಳಿ ಮಾರಾಟದಂಗಡಿಯಲ್ಲಿ ಕಾಡು ಹಂದಿ ಮಾಂಸ ಪತ್ತೆ: ಇಬ್ಬರ ಸೆರೆ

ಕಾಸರಗೋಡು: ಕೋಳಿ ಮಾರಾಟ ದಂಗಡಿಯಲ್ಲಿ ಕಾಡು ಹಂದಿ  ಮಾಂಸದ ಪದಾರ್ಥ ತಯಾರಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆಯ ತಂಡ ಬಂಧಿಸಿದೆ.

ಚೆರುವತ್ತೂರು ಕೊವ್ವಲ್ ಪುದಿಯಕಂಡಂ ರಸ್ತೆ ಬಳಿಯ ಚಿಕ್ಕನ್ ಸ್ಟಾಲ್ ಮಾಲಕ ರಾಮನ್‌ಚಿರ ನಿವಾಸಿ ಕೆ. ಸುರೇಶನ್ (45) ಮತ್ತು ಆತನ ಸ್ನೇಹಿತ ವಡಕುಂಬಾಡಿನ ಎ. ರಂಜಿತ್ ಕುಮಾರ್ (43) ಎಂಬವರನ್ನು ಇದಕ್ಕೆ ಸಂಬಂಧಿಸಿ ಬಂಧಿಸಲಾಗಿದೆ.

ಈ ಚಿಕ್ಕನ್ ಸ್ಟಾಲ್‌ನಲ್ಲಿ ಕಾಡು ಹಂದಿಯ ಪದಾರ್ಥ ತಯಾರಿಸುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಗುಪ್ತ ಮಾಹಿತಿ ಲಭಿಸಿತ್ತು. ಅದರಂತೆ ಆ ಅಂಗಡಿಗೆ ಸೆಕ್ಷನ್ ಫೋರೆಸ್ಟ್ ಆಫೀಸರ್ ಕೆ.ಎನ್. ಲಕ್ಷ್ಮಣನ್‌ರ ನೇತೃತ್ವದ ಅರಣ್ಯ ಇಲಾಖೆಯ ತಂಡ ನಿನ್ನೆ ದಾಳಿ ನಡೆಸಿ ಕಾಡು ಹಂದಿ ಮಾಂಸದ ಸಹಿತ ಇಬ್ಬರನ್ನು ಸೆರೆ ಹಿಡಿದು, ವನ್ಯಜೀವಿ ಸಂರಕ್ಷಣೆ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ಬಂಧಿತರನ್ನು ನಂತರ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನದಲ್ಲಿ ರಿಸಲಾಗಿದೆ.

RELATED NEWS

You cannot copy contents of this page