ಮಂಜೇಶ್ವರ: ಅಪರಿಮಿತ ವೇಗದಲ್ಲಿ ತಲುಪಿದ ತಾಯಿ ಹಾಗೂ ಪುತ್ರಿ ಗಾಯಗೊಂಡಿದ್ದಾರೆ. ಜೊತೆಗಿದ್ದ ಮೊಮ್ಮಗ ಗಾಯಗಳಿಲ್ಲದೆ ಆಶ್ಚರ್ಯಕರವಾಗಿ ಪಾರಾಗಿದ್ದಾನೆ. ಗಾಯಗೊಂಡ ಪಾವೂರು, ಗೇರುಕಟ್ಟೆಯ ಶಾಂಭವಿ (68), ಪುತ್ರಿ ಸುಚಿತ್ರ (48) ಎಂಬಿವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಸಮೀಪದಲ್ಲಿ ಅಪಘಾತ ಸಂಭವಿಸಿದೆ. ಕೆಲಸಕ್ಕೆ ಸಂಬಂಧಿಸಿದ ಅಗತ್ಯಕ್ಕಾಗಿ ಶಾಂಭವಿ, ಪುತ್ರಿ ಹಾಗೂ ಮೊಮ್ಮಗ ಇಲ್ಲಿನ ಒಂದು ಮನೆಗೆ ತಲುಪಿದ್ದರು. ಮನೆಯವರಲ್ಲಿ ಮಾತುಕತೆ ನಡೆಸಿದ ಬಳಿಕ ಹಿಂತಿರುಗಲೆಂದು ಮೂವರು ರಸ್ತೆಗಿಳಿದಿದ್ದರು. ಈ ಮಧ್ಯೆ ಅಪರಿಮಿತ ವೇಗದಲ್ಲಿ ತಲುಪಿದ ಕಾರು ಮೂರು ಮಂದಿಗೂ ಢಿಕ್ಕಿ ಹೊಡೆದಿದೆ. ಶಬ್ದ ಕೇಳಿ ಸ್ಥಳೀಯರು ಓಡಿ ಬರುವ ಮಧ್ಯೆ ಕಾರಿನಲ್ಲಿದ್ದವರು ನಿಲ್ಲಿಸದೆ ಪರಾರಿಯಾಗಿದ್ದಾರೆ. ಮಂಜೇಶ್ವರ ಪೊಲೀಸರು ನಡೆಸಿದ ತನಿಖೆಯಲ್ಲಿ ಅಪಘಾತ ಸೃಷ್ಟಿಸಿದ ಕಾರನ್ನು ಕಸ್ಟಡಿಗೆ ತೆಗೆದಿದ್ದಾರೆ.







