ಗಾಂಜಾ ಮಾರಾಟ ವ್ಯಾಪಕ ಬದಿಯಡ್ಕದಲ್ಲಿ ಓರ್ವ ಸೆರೆ
ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಗಾಂಜಾ ವ್ಯಾಪಾರ ತೀವ್ರಗೊಂಡಿರುವುದಾಗಿ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ವ್ಯಾಪಕ ಕಾರ್ಯಾ ಚರಣೆ ಆರಂಭಿಸಿದ್ದಾರೆ. ಇದೇ ವೇಳೆ ಬೇಳದ ಕಾರ್ಗಿಲ್ ಎಂಬಲ್ಲಿ ಗಾಂಜಾ ಸಹಿತ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬೇಳ ಕುಂಜಾರು ನಿವಾಸಿ ಇಬ್ರಾಹಿಂ ಇಸ್‌ಹಾಕ್ (26)ಎಂಬಾತನನ್ನು ಬಂಧಿಸಿ ಆತನ ಕೈಯಲ್ಲಿದ್ದ 5.93 ಗ್ರಾಂ ಗಾಂಜಾವನ್ನು ವಶಪಡಿಸಲಾಗಿದೆ. ಇತ್ತೀಚೆಗೆ ಪೆರ್ಲ ಪೇಟೆ ಯಲ್ಲೂ ಗಾಂಜಾ ಸಹಿತ ಓರ್ವನನ್ನು ಬಂಧಿಸಲಾಗಿತ್ತು.