ಗಾಂಧೀದರ್ಶನ್ ವೇದಿಯಿಂದ ಬದಿಯಡ್ಕದಲ್ಲಿ ಸ್ವಾತಂತ್ರ್ಯ ಸ್ಮೃತಿ ಸಂಗಮ

ಬದಿಯಡ್ಕ: ಕೇರಳ ಪ್ರದೇಶ್ ಗಾಂಧೀದರ್ಶನ್ ವೇದಿ ಕಾಸರಗೋಡು ವಿಧಾನಸಭಾ ಮಂಡಲ ಸಮಿತಿಯ ಆಶ್ರಯದಲ್ಲಿ ಬದಿಯಡ್ಕದಲ್ಲಿ ಸ್ವಾತಂತ್ರ್ಯ ಸ್ಮೃತಿ ಸಂಗಮ ನಡೆಸಲಾಯಿತು.ಅಧ್ಯಕ್ಷ ಉಸ್ಮಾನ್ ಕಡವತ್ ಅಧ್ಯಕ್ಷತೆ ವಹಿಸಿದರು. ಯುಡಿಎಫ್ ವಿಧಾನಸಭಾ ಮಂಡಲ ಸಂಚಾಲಕ ಕೆ. ಖಾಲಿದ್ ಉದ್ಘಾಟಿಸಿದರು. ವಿ. ದಾಮೋದರನ್ ಪ್ರಧಾನ ಭಾಷಣ ಮಾಡಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಗಾಂಧಿದರ್ಶನ್ ವೇದಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಫಿ ಚೂರಿಪಳ್ಳ, ಎಂ. ನಾರಾಯಣನ್, ಆನಂದ ಕೆ. ಮವ್ವಾರ್, ಖಾದರ್ ಮಾನ್ಯ, ಕರುಣಾಕರನ್ ನಂಬ್ಯಾರ್, ಗಂಗಾಧರ ಗೋಳಿಯಡ್ಕ, ಶ್ರೀನಾಥ್ ಎ. ಸಹಿತ ಹಲವರು ಭಾಗವಹಿಸಿದರು.

RELATED NEWS

You cannot copy contents of this page