ಕಾಸರಗೋಡು: ತಳಂಗರೆ ಗ್ರಾಮಕಚೇರಿಯಲ್ಲಿ ನಿನ್ನೆ ಕಳವು ಯತ್ನ ನಡೆದಿದೆ. ಕಚೇರಿಯ ಬೀಗ ಒಡೆದು ಒಳನುಗ್ಗಿದ ಕಳ್ಳರು, ಅದರೊ ಳಗಿನ ಕಡತಗಳು ಮತ್ತು ಸಾಮಗ್ರಿಗಳನ್ನು ಎಳೆದು ಹಾಕಿ ಚೆಲ್ಲಾಪಿಲ್ಲಿಗೊಳಿಸಿದ್ದಾರೆ. ಈ ಬಗ್ಗೆ ಪ್ರಸ್ತುತ ಕಚೇರಿಯ ಗ್ರಾಮಾಧಿಕಾರಿ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.