ಚಪ್ಪಲಿ, ಕಾರು ಸೇತುವೆಯಲ್ಲಿ ಉಪೇಕ್ಷಿಸಿ ಹೊಳೆಗೆ ಹಾರಿದ ವ್ಯಾಪಾರಿ: ಶೋಧ ಆರಂಭ
ಕಾಸರಗೋಡು: ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ವಾಟ್ಸಪ್ನಲ್ಲಿ ಸಂದೇಶ ಕಳುಹಿಸಿದ ಬಳಿಕ ನಗರದಲ್ಲಿ ವ್ಯಾಪಾರಿಯಾದ ಯುವಕ ಚಂದ್ರಗಿರಿ ಹೊಳೆಗೆ ಹಾರಿರುವುದಾಗಿ ಸಂಶಯಿಸಲಾಗಿದೆ. ಅಗ್ನಿಶಾಮಕದಳ, ಪೊಲೀಸರು ಹಾಗೂ ನಾಗರಿಕರು ಚಂದ್ರಗಿರಿ ಹೊಳೆಯಲ್ಲಿ ಶೋಧ ಆರಂಭಿಸಿದ್ದಾರೆ.
ಇಂದು ಬೆಳಿಗ್ಗೆ೭.೩೦ ಗಂಟೆ ವೇಳೆ ಈ ಘಟನೆ ನಡೆದಿದೆ. ಓರ್ವ ವ್ಯಕ್ತಿ ಚಂದ್ರಗಿರಿ ಹೊಳೆಗೆ ಹಾರುವುದನ್ನು ಕಂಡಿರುವುದಾಗಿ ಆ ಮೂಲಕ ಸಂಚರಿಸಿದವರು ಪರಿಸರ ನಿವಾಸಿಗಳಿಗೆ ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದಲ್ಲಿ ಸ್ಥಳಕ್ಕೆ ತಲುಪಿದ ಪೊಲೀಸರು ನಡೆಸಿದ ಪರಿಶೀಲನೆ ವೇಳೆ ಒಂದು ಜೋಡಿ ಚಪ್ಪಲಿ ಹಾಗೂ ಹೋಂಡ ಸಿಟಿ ಕಾರು ಸೇತುವೆ ಮೇಲೆ ಉಪೇ ಕ್ಷಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾರಿನೊಳಗಿನಿಂದ ಒಂದು ಮೊಬೈಲ್ ಫೋನ್ ಕೂಡಾ ಪತ್ತೆಹಚ್ಚಲಾಗಿದೆ. ಕಾರು, ಚಪ್ಪಲಿ ಹಾಗೂ ಫೋನ್ ಚಂದ್ರಗಿರಿ ಜಂಕ್ಷನ್ನಲ್ಲಿ ಜ್ಯೂಸ್ ಅಂಗಡಿ ನಡೆಸುವ ಉಳಿಯತ್ತಡ್ಕ ರಹಮ್ಮತ್ ನಗರದ ಹಸೈನಾರ್ ಎಂಬವರದ್ದೆಂದು ಸಂಬಂಧಿಕರು ಪತ್ತೆಹಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸುತ್ತಿರು ವುದಾಗಿಯೂ ಘಟನೆ ಬಗ್ಗೆ ಎಫ್ಐ ಆರ್ ದಾಖಲಿಸಿಕೊಂಡಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.