ಚಹಾ ಕುಡಿಯುತ್ತಿದ್ದಾಗ ಯುವತಿ ಕುಸಿದು ಬಿದ್ದು ಮೃತ್ಯು
ಬದಿಯಡ್ಕ: ಚಹಾ ಕುಡಿ ಯುತ್ತಿದ್ದಂತೆ ಕುಸಿದು ಬಿದ್ದು ಯುವತಿ ಮೃತಪಟ್ಟ ಘಟನೆ ನಡೆದಿದೆ. ಪೆರಡಾಲ ಕೆಡಂಜಿ ನಿವಾಸಿ ಬಾಬು ಎಂಬವರ ಪತ್ನಿ ಗೀತಾ (40) ಮೃತ ಯುವತಿ. ನಿನ್ನೆ ಬೆಳಿಗ್ಗೆ ಇವರು ಚಹಾ ಕುಡಿಯುತ್ತಿದ್ದಾಗ ಕೆಮ್ಮು ಉಂಟಾಗಿದೆ. ಅದರ ಬೆನ್ನಲ್ಲೇ ಇವರು ಕುಸಿದು ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ತಲುಪಿ ಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ಪತಿ, ಪುತ್ರ ಸತ್ಯಪ್ರಕಾಶ್, ಸಹೋದರಿಯರಾದ ಯಮುನಾ, ಲಲಿತ, ಕಲ್ಯಾಣಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.