ಚಿಕಿತ್ಸೆಯಲ್ಲಿದ್ದ ರಿಕ್ಷಾ ಚಾಲಕ ನಿಧನ
ಸೀತಾಂಗೋಳಿ: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ರಿಕ್ಷಾ ಚಾಲಕ ಮುಖಾರಿಕಂಡ ಕೋಡಿಮೂಲೆಯ ನಿವಾಸಿ ಗೋಪಾಲಕೃಷ್ಣ (54) ನಿಧನ ಹೊಂದಿದರು. ಸೀತಾಂಗೋಳಿಯಲ್ಲಿ ರಿಕ್ಷಾಚಾಲಕರಾಗಿದ್ದರು. ದಿ| ಸುಬ್ಬಪ್ಪು ಮುಖಾರಿಯವರ ಪುತ್ರನಾಗಿದ್ದಾರೆ. ಮೃತರು ತಾಯಿ ಕಾವೇರಿ, ಪತ್ನಿ ರಜನಿ, ಮಕ್ಕಳಾದ ಕಾವ್ಯಶ್ರೀ, ಪ್ರಣವ್, ಅಳಿಯ ರಮೇಶ, ಸಹೋದರಿಯರಾದ ಸುಶೀಲ, ಲೀಲಾವತಿ, ಇಂದಿರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.