ಚಿನ್ಮಯಾ ವಿದ್ಯಾಲಯದಲ್ಲಿ ವಿಶ್ವಪರಿಸರ ದಿನಾಚರಣೆ
ಕಾಸರಗೋಡು: ಜಿಲ್ಲಾ ಅಬಕಾರಿ ಇಲಾಖೆಯ ವಿಶ್ವ ಪರಿಸರ ದಿನಾಚರಣೆಯ ಜಿಲ್ಲಾಮಟ್ಟದ ಉದ್ಘಾಟನೆ ಚಿನ್ಮಯಾ ವಿದ್ಯಾಲಯದಲ್ಲಿ ಕಾಸರಗೋಡು ರೇಂಜ್ ವಿಮುಕ್ತಿ ಮಿಶನ್ನ ಹಾಗೂ ಚಿನ್ಮಯಾ ವಿದ್ಯಾಲಯದ ಜಂಟಿ ಆಶ್ರಯದಲ್ಲಿ ನಡೆಸಲಾಯಿತು.
ಡೆಪ್ಯೂಟರಿ ಎಕ್ಸೈಸ್ ಕಮಿಶನರ್ ಪಿ.ಕೆ. ಜಯರಾಜ್ ಉದ್ಘಾಟಿಸಿದರು. ಬಳಿಕ ಮಕ್ಕಳಿಗೆ ಪರಿಸರ ದಿನದ ಸಂದೇಶ ನೀಡಿದರು. ಚಿನ್ಮಯಾ ಮಿಶನ್ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಅಧ್ಯಕ್ಷತೆ ವಹಿಸಿದರು. ಪ್ರಾಂಶುಪಾಲ ಸುನಿಲ್ ಕುಮಾರ್ ಕೆ., ಪ್ರಶಾಂತ ಬಿ., ವಿಮುಕ್ತಿ ಕೋರ್ಡಿನೇಟರ್ ಶೀನಾ ಕೆ.ಪಿ., ಅಬಕಾರಿ ಇನ್ಸ್ಪೆಕ್ಟರ್ ಜೋಸಫ್, ಕಣ್ಣನ್ಕುಂಞಿ ಉಪಸ್ಥಿತರಿದ್ದರು. ಬಳಿಕ ಶಾಲಾ ಆವರಣದಲ್ಲಿ ವಿವಿಧ ಫಲ ವೃಕ್ಷ ಗಿಡಗಳನ್ನು ನೆಡಲಾಯಿತು.