ಜಿಲ್ಲಾ ಪೊಲೀಸ್ ಕೇಂದ್ರಕ್ಕೆ ನಾಳೆ ಯೂತ್‌ಲೀಗ್ ಮಾರ್ಚ್
ಕಾಸರಗೋಡು: ಕ್ರಿಮಿನಲ್ ಪೊಲೀಸ್‌ರಾಜ್ ವಿರುದ್ಧ, ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಮುಸ್ಲಿಂ ಯೂತ್ ಲೀಗ್ ನಾಳೆ ಜಿಲ್ಲಾ ಪೊಲೀಸ್ ಕೇಂದ್ರಕ್ಕೆ ಮಾರ್ಚ್ ನಡೆಸಲಿದೆ. ಇದನ್ನು ಯಶಸ್ವಿಗೊಳಿಸಲು ಮಂಡಲದ ನಗರಸಭಾ, ಪಂಚಾಯತ್ ಸಮಿತಿಗಳು ಮುಂದೆ ಬರಬೇಕೆಂದು ಸಂಬಂಧ ಪಟ್ಟವರು ಕರೆ ನೀಡಿದ್ದಾರೆ. ಈ ಬಗ್ಗೆ ನಡೆದ ಸಭೆಯಲ್ಲಿ ಅಧ್ಯಕ್ಷ ಸಿದ್ದಿಕ್ ಸಂತೋಷ್‌ನಗರ್ ಅಧ್ಯಕ್ಷತೆ ವಹಿಸಿದರು.