ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ತಿಳುವಳಿಕಾ ತರಗತಿ
ಕುಂಬಳೆ: ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆ ಹಾಗೂ ಐಎಂಎ ಎಂಬ ಕಾಸರಗೋಡು ಬ್ರಾಂಚ್ನ ಜಂಟಿ ಆಶ್ರಯದಲ್ಲಿ ಏಡ್ಸ್ ವಿರುದ್ಧ ದಿನಾಚರಣೆ ಹಾಗೂ ತಿಳುವಳಿಕಾ ತರಗತಿ ನಡೆಯಿತು. ಐಎಂಎ ಕಾಸರಗೋಡು ಬ್ರಾಂಚ್ ಅಧ್ಯಕ್ಷ ಡಾ| ಹರಿಕಿರಣ್ ಟಿ. ಬಂಗೇರ ಉದ್ಘಾಟಿಸಿದರು. ಡಾ| ಮುಹಮ್ಮದ್ ಶರೀಫ್ ತಿಳುವಳಿಕಾ ತರಗತಿ ನಡೆಸಿದರು. ಪ್ರೀತಂ ಪ್ರಜ್ವಲ್ ಡಿ’ಸೋಜಾ ಅಧ್ಯಕ್ಷತೆ ವಹಿಸಿದರು. ಎ.ಪಿ. ಅಶ್ವತಿ ಸ್ವಾಗತಿಸಿ, ರೇವತಿ ಕೆ. ವಂದಿಸಿದರು. ಆಸ್ಪತ್ರೆ ನೌಕರರು ಭಾಗವಹಿಸಿದರು.