ಜಿಲ್ಲೆಯಲ್ಲಿ ಕೈಗಾರಿಕೆಗಳು ಉಚ್ಛ್ರಾಯ ಸ್ಥಿತಿಯಲ್ಲಿ
ಕಾಸರಗೋಡು: ಜಿಲ್ಲಾ ಪಂಚಾ ಯತ್, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿಯಾಗಿ ಆಯೋಜಿಸಿದ ರೈಸಿಂಗ್ ಕಾಸರಗೋಡುನಂಗವಾಗಿ ಕೈಗಾರಿಕಾ ವಲಯದಲ್ಲಿ ಪ್ರಗತಿ ಕಂಡುಬಂದಿದೆ. ಈಗಾಗಲೇ ಜಿಲ್ಲೆಗೆ ತಲುಪಿದ್ದು ೧೫೦ ಕೋಟಿ ರೂ.ಗಳ ಠೇವಣಿಯಾಗಿದೆ.
ಠೇವಣಿ ಸಂಗಮದಲ್ಲಿ ೧೦ ಯೋಜನೆಗಳ ಪ್ರಾರಂಭ ಚಟುವಟಿಕೆಗಳು ಆರಂಭಗೊಂಡಿದೆ. ರಬ್ಬರ್ ಲ್ಯಾಬೆಕ್ಸ್ ಉತ್ಪನ್ನಗಳ ನಿರ್ಮಾಣಕ್ಕೆ ಸಂಬಂಧಿಸಿ ಕಾಕೋಜನ್ ಇಂಡ್ಯ, ಪ್ರೈಡಂಟ್ ಇಂಡ್ಯ ಕಂಪೆನಿಗಳು, ಮಡಿಕೈ, ಮುನ್ನಾಡ್ ಎಂಬೆಡೆಗಳಲ್ಲಿ ಖಾಸಗಿ ಕೈಗಾರಿಕಾ ಎಸ್ಟೇಟ್ಗಳು, ಕೋಟಪುರಂ ಕಾಯಲ್ ಟೂರಿಸಂ ರಿಸೋರ್ಟ್, ಯೂಬೋನ್ ಡೈರಿ ಪ್ರೊಜೆಕ್ಟ್ ಎಂಬಿವು ಜಿಲ್ಲೆಯಲ್ಲಿ ಚಟುವಟಿಕೆ ಆರಂಭಿಸಿದೆ.
ಅನಂತಪುರ, ಮಡಿಕೈ ಎಸ್ಟೇಟ್ಗಳನ್ನು ಕೇಂದ್ರೀಕರಿಸಿ ಹೆಚ್ಚಿನ ಉದ್ಯಮಗಳು ಕಾರ್ಯಾಚರಿಸಲಿದೆ. ಮಲಬಾರ್ಫರ್ನೀಚರ್ ಕನ್ಸೋಷ್ಯಕ್ಕೆ ಭೂಮಿ ಲಭ್ಯಗೊ ಳಿಸುವುದರೊಂದಿಗೆ ಚಟುವಟಿಕೆ ಆರಂಭಗೊಳ್ಳಲಿದೆ. ಇನ್ನೂರರಷ್ಟು ಮಂದಿಗೆ ಈ ಉದ್ಯಮಗಳ ಮೂಲಕ ಕೆಲಸ ಲಭಿಸಲಿದೆ. ಠೇವಣಿ ಸಂಗಮದ ಮುಂದಿನ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಲು ಅವಲೋಕನ ಸಭೆ ಜರಗಿತು.