ಸುದೆಂಬಳ ಸಂಕ ಶೋಚನೀಯಾವಸ್ಥೆಯಲ್ಲಿ : ವಾಹನ ಸಂಚಾರ ಭೀತಿ

ಪೈವಳಿಕೆ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಸುದೆಂಬಳದಲ್ಲಿ  ಸಂಕವೊಂದು ಶೋಚನೀಯಾವಸ್ಥೆಯ ಲ್ಲಿದ್ದು, ವಾಹನ ಸಂಚಾರಕ್ಕೆ ಭೀತಿ ಸೃಷ್ಟಿಯಾಗಿದೆ. ಕನಿಯಾಲ-ಬಳ್ಳೂರು ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯ ಸುದೆಂಬಳದಲ್ಲಿ ಹಲವಾರು ವರ್ಷಗಳ ಹಿಂದೆ ನಿರ್ಮಿಸಿದ ಸಂಕ ಶೋಚಯನೀಯಾವಸ್ಥೆಯಲ್ಲಿದೆ. ಸಂಕದ ಅಡಿ ಭಾಗದ ಕಾಂಕ್ರೀಟ್ ಬಿದ್ದು ಕಬ್ಬಿಣದ ಸರಳು ಗೋಚರಿಸುತ್ತಿದೆ.

ಸಂಕದ ಮೂಲಕ ಒಮ್ಮೆ ಒಂದು ವಾಹನ ಮಾತ್ರವೇ ಸಂಚರಿಸಲು ಸ್ಥಳಾವಕಾಶವಿದ್ದು, ಎರಡು ಭಾಗದಿಂದ ಬರುವ ವಾಹನಗಳು ಕೆಲವೊಮ್ಮೆ ಅಪಘಾತಕ್ಕೀಡಾಗುತ್ತಿರುವುದಾಗಿ ದೂರಲಾಗಿದೆ. ಮಾತ್ರವಲ್ಲ ಸಂಕದ ಒಂದು ಬದಿಗೆ ನಿರ್ಮಿಸಿದ ಕಬ್ಬಿಣದ ಬೇಲಿ ವಾಹನ ಢಿಕ್ಕಿಯಾಗಿ ಹಾನಿಗೊಂಡಿದೆ. ಈ ರಸ್ತೆಯಿಂದ ದಿನನಿತ್ಯ ಬಸ್ ಸಹಿತ ನೂರಾರು ವಾಹನ ಸಂಚಾರ ನಡೆಸುತ್ತಿದೆ. ಶೋಚನೀಯ ಹಾಗೂ ಇಕ್ಕಟ್ಟಾದ ಈ ಸಂಕವನ್ನು ಕೆಡವಿ ಹೊಸ ಸಂಕ ನಿರ್ಮಿಸಬೇಕೆಂದು ಊರವರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page