ಜಿಲ್ಲೆಯಲ್ಲಿ ಮತಾಂತರಕ್ಕೆ ಜಿಲ್ಲಾಡಳಿತ  ಒತ್ತಾಸೆ- ರವೀಶ ತಂತ್ರಿ ಕುಂಟಾರು

ಬದಿಯಡ್ಕ: ಮತಾಂತರದ ಉದ್ದೇಶದಿಂದ ನಡೆಸುವ ಮದುವೆಗಳಿಗೆ ಕಾಸರಗೋಡು ಜಿಲ್ಲಾಡಳಿತ ಹಾಗೂ ಪೊಲೀಸರು ಒತ್ತಾಸೆ ನೀಡುತ್ತಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಆರೋಪಿಸಿದ್ದಾರೆ.

ಬದಿಯಡ್ಕದಲ್ಲಿ ಇತ್ತೀಚೆಗೆ ನಡೆದ ಮದುವೆ ನೋಂದಾವಣೆಗೆ ಸಹಾಯ ವೊದಗಿಸಿರುವುದು ಕೆಲವು ಪೊಲೀಸ್ ಅಧಿಕಾರಿಗಳಾಗಿದ್ದಾರೆ. ಪರಾರಿಯಾಗುವ ವರಿಗೆ ಆರ್ಥಿಕ ಸಹಾಯ, ಭದ್ರತೆ, ವಾಸ ಸೌಕರ್ಯ ಒದಗಿಸಿಕೊಡುವುದು ಉಗ್ರಗಾಮಿ ಸ್ವಭಾವದ ಸಂಘಟನೆಗ ಳಾಗಿವೆ. ಐಸಿಸ್ ರಿಕ್ರೂಟ್‌ಮೆಂಟ್ ನಡೆದ ದೇಶದ ಜಿಲ್ಲೆಗಳಲ್ಲೊಂದಾದ ಕಾಸರಗೋಡಿನಲ್ಲಿ ಹೆಚ್ಚುತ್ತಿರುವ ಇಂತಹ ಘಟನೆಗಳನ್ನು ಕ್ಷುಲ್ಲಕವಾಗಿ ಕಾಣಲು ಸಾಧ್ಯವಿಲ್ಲ.

ಒಂದು ಧರ್ಮಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮತಾಂತರ ನಡೆಯುತ್ತಿದೆ ಎಂಬುವುದರಲ್ಲಿ ಆಶ್ಚರ್ಯವಿಲ್ಲ. ಕೇರಳದ ಮುಖ್ಯಮಂತ್ರಿ ನಾಳೆ, ವಿಧಾನಸಭೆಯಲ್ಲಿ ಈ ಕುರಿತಾದ ಲೆಕ್ಕಾಚಾರಗಳನ್ನು ಈ ಹಿಂದೆ ಮಂಡಿಸಿದ್ದಾರೆ. ಪ್ರೇಮದ ಕುಣಿಕೆಯಲ್ಲಿ ಸಿಲುಕಿ ಕೌನ್ಸಿಲಿಂಗ್ ವೇಳೆಯೋ, ನ್ಯಾಯಾಲಯದಲ್ಲೋ, ಹೆಣ್ಮಕ್ಕಳು ಹೆತ್ತವರೊಂದಿಗೆ ಮಾತನಾಡಲು ಕೂಡಾ ಮುಂದಾಗುತ್ತಿಲ್ಲ ಎಂಬುವುದು ಹೆಣ್ಮಕ್ಕಳನ್ನು ಎಷ್ಟರ ಮಟ್ಟಿಗೆ ಬ್ರೈನ್‌ವಾಶ್ ಮಾಡಲಾಗುತ್ತಿದೆ ಎಂಬುವುದಕ್ಕೆ ಪುರಾವೆಯಾಗಿದೆ. ವಿವಿಧ ಕ್ರಿಶ್ಚಿಯನ್ ಸಭೆಗಳು ಹಾಗೂ ಧರ್ಮಗುರುಗಳು ಕೂಡಾ ಇದೇ ಆತಂಕವನ್ನು ವ್ಯಕ್ತಪಡಿಸಿರುತ್ತಾರೆ. ಪ್ರೀತಿಸಿ ಮದುವೆಯಾಗುವುದಕ್ಕೆ ಬಿಜೆಪಿ ಎದುರಲ್ಲ. ಆದರೆ ಪ್ರೀತಿಯ ಕುಣಿಕೆಯಲ್ಲಿ ಬೀಳಿಸಿ ಹಿಂದೂ ಹಾಗೂ ಕ್ರಿಶ್ಚಿಯನ್ ಹೆಣ್ಮಕ್ಕಳನ್ನು ಮತಾಂತರ ನಡೆಸಲಿರುವ ಪ್ರಯತ್ನಗಳು ಹಾಗೂ ಅದಕ್ಕೆ ಬೆಂಬಲ ನೀಡುವ ಆಡಳಿತದ, ಪೊಲೀಸರ ಯತ್ನವನ್ನು ಬಿಜೆಪಿ ಬಲವಾಗಿ ಎದುರಿಸುತ್ತಿದೆಯೆಂದು ರವೀಶ ತಂತ್ರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page