ಜಿ.ಪಂ. ಅಧ್ಯಕ್ಷೆಗೆ ಕೊಲ್ಕತ್ತಾ ಯು.ಆರ್.ಬಿ. ಗ್ಲೋಬಲ್ ಪ್ರಶಸ್ತಿ

ಕಾಸರಗೋಡು: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಕೊಲ್ಕತ್ತಾ ಯು.ಆರ್.ಬಿ. ‘ಗ್ಲೋಬಲ್ ಪ್ರಶಸ್ತಿ’ಗೆ ಅರ್ಹರಾಗಿದ್ದಾರೆ. ಸಾಮಾಜಿಕ ಕ್ಷೇತ್ರಗಳಲ್ಲಿ ಅವರ ದುಡಿಮೆ, ಕಾರ್ಯಪ್ರವೃತ್ತಿಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

1995ರಲ್ಲಿ ಕಿರಿಯ ಪ್ರಾಯದಲ್ಲಿ  ಅಂದರೆ ತಮ್ಮ 21ನೇ ಪ್ರಾಯದಲ್ಲಿ ಮಡಿಕೈ ಪಂಚಾಯತ್ ಅಧ್ಯಕ್ಷೆಯಾಗಿದ್ದ ಬೇಬಿ ಬಾಲಕೃಷ್ಣನ್ 2000ದಲ್ಲೂ ಅದೇ ಪಂಚಾಯತ್‌ನ ಅಧ್ಯಕ್ಷೆಯಾಗಿ ಪುನರಾಯ್ಕೆಯಾದರು. ಜಿಲ್ಲೆಯನ್ನು ‘ಸಂಪೂರ್ಣ ಡಿಜಿಟಲ್ ಸಾಕ್ಷರತೆ’ಯ ಜಿಲ್ಲೆಯನ್ನಾಗಿ ಮಾರ್ಪಡಿಸಲಾಗಿದ್ದು, ಅಲ್ಲದೆ ಅಧಿಕೃತ ವೃಕ್ಷ, ಪಕ್ಷಿ, ಮೃಗ, ಸಸ್ಯಗಳು ಎಂಬಿವುಗಳಿರುವ ಜಿಲ್ಲೆಯನ್ನಾಗಿ ಘೋಷಣೆ ಮಾಡಿದ್ದು, ಇವರು ಜಿಲ್ಲಾ ಪಂ. ಅಧ್ಯಕ್ಷೆ ಆಗಿರುವ ಕಾಲದಲ್ಲಾಗಿದೆ. ಇವುಗಳೆಲ್ಲವನ್ನೂ ಪರಿಗಣಿಸಿ ಬೇಬಿ ಬಾಲಕೃಷ್ಣನ್‌ರಿಗೆ ಪ್ರಸ್ತುತ ‘ಗ್ಲೋಬಲ್ ಪ್ರಶಸ್ತಿ’ ನೀಡಲಾಗುತ್ತದೆ.

You cannot copy contents of this page